HEALTH TIPS

ಯಾವೆಲ್ಲಾ ಹಣ್ಣುಗಳು ಮಧುಮೇಹಿಗಳಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುವುದು?

              ಅತೀ ಹೆಚ್ಚು ಮಧುಮೇಹಿಗಳನ್ನು ಹೊಂದಿರುವವರಲ್ಲಿ ಭಾರತ ನಂ. 1 ಸ್ಥಾನದಲ್ಲಿದೆ. ವರ್ಷದಿಂದ ವರ್ಷಕ್ಕೆ ಮಧುಮೇಹಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅನಾರೋಗ್ಯಕರ ಜೀವನಶೈಲಿ ಹಾಗೂ ವ್ಯಾಯಾಮ ಇಲ್ಲದೇ ಇರುವುದು ಮಧುಮೇಹ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

               ಮಧುಮೇಹ ಸಮಸ್ಯೆ ವಂಶಪಾರಂಪರ್ಯವಾಗಿಯೂ ಬರುವುದು, ಆದರೆ ಪೋಷಕರಿಗೆ ಮಧುಮೇಹವಿದ್ದರೂ ಮಕ್ಕಳು ಆರೋಗ್ಯಕರ ಜೀವನಶೈಲಿ ಪಾಲಿಸಿದರೆ ಮಧುಮೇಹ ತಡೆಗಟ್ಟಬಹುದು.

                ಮಧುಮೇಹ ಬಂದರೆ ಅದನ್ನು ನಿಯಂತ್ರಣದಲ್ಲಿಡಬಹುದೇ ಹೊರತು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ. ಹಾಗಾಗಿ ಮಧುಮೇಹ ಬಂದ ಮೇಲೆ ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕು. ಏಕೆಂದರೆ ತಾವು ತಿಂದ ಆಹಾರದಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದರೆ ಆರೋಗ್ಯಕ್ಕೆ ಕಷ್ಟ.

              ಆದ್ದರಿಂದ ಹಣ್ಣುಗಳನ್ನು ಕೂಡ ತಿನ್ನಲು ಭಯ ಪಡುತ್ತಾರೆ. ಹಣ್ಣುಗಳಲ್ಲಿ ಸಿಹಿಯಂಶ ಹೆಚ್ಚಾಗಿ ಇರುವುದರಿಂದ ಹಣ್ಣುಗಳನ್ನು ತಿಂದಾಗ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು. ಆದರೆ ಈ ಹಣ್ಣುಗಳನ್ನು ಮಧುಮೇಹಿಗಳು ಯಾವುದೇ ಭಯವಿಲ್ಲದೆ ತಿನ್ನಬಹುದು. ಈ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ ಹಾಗೂ ಈ ಹಣ್ಣುಗಳಲ್ಲಿರುವ ಪೋಷಕಾಂಶಗಳೂ ದೊರೆಯುವಂತಾಗುವುದು. ಬನ್ನಿ, ಯಾವೆಲ್ಲಾ ಹಣ್ಣುಗಳು ಮಧುಮೇಹಿಗಳಿಗೆ ಒಳ್ಳೆಯದು ಎಂದು ನೋಡೋಣ:

                           ಸೇಬು

               ಸೇಬನ್ನು ಮಿತಿಯಲ್ಲಿ ತಿನ್ನಬಹುದು. ಇದರಲ್ಲಿರುವ ಪೋಷಕಾಂಶಗಳು ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು. ಅದರಲ್ಲೂ ಮರ ಸೇಬು ತುಂಬಾನೇ ಒಳ್ಳೆಯದು. ದಿನದಲ್ಲಿ ಒಂದು ಸೇಬನ್ನು ಯಾವುದೇ ಭಯವಿಲ್ಲದೆ ತಿನ್ನಬಹುದು.

            ಬೆಣ್ಣೆ ಹಣ್ಣು ಬೆಣ್ಣೆ ಹಣ್ಣು ಪೋಷಕಾಂಶಗಳ ಆಗರ. ಇದರಲ್ಲಿ 20ಕ್ಕೂ ಹೆಚ್ಚು ಖನಿಜಾಂಶಗಳಿವೆ. ಅಲ್ಲದೆ ಇದರಲ್ಲಿ ನಾರಿನಂಶ ಕೂಡ ಅಧಿಕವಿದೆ. ಬೆಣ್ಣೆ ಹಣ್ಣು ತಿಂದರೆ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ. ದಿನದಲ್ಲಿ ಅರ್ಧ ಬೆಣ್ಣೆ ಹಣ್ಣು ತಿಂದರೆ ತುಂಬಾ ಒಳ್ಳೆಯದು. ಇನ್ನು ಮೈ ಬೊಜ್ಜು ಕರಗಿಸಲು ಇದನ್ನು ಒಂದು ಹೊತ್ತಿನ ಆಹಾರವಾಗಿ ಸೇವಿಸಬಹುದು.

           ಬೆರ್ರಿ ಹಣ್ಣುಗಳು ಬ್ಲ್ಯಾಕ್‌ ಬೆರ್ರಿ, ಬ್ಲೂ ಬೆರ್ರಿ, ಸ್ಟ್ರಾಬೆರ್ರಿ ಈ ರೀತಿಯ ಬೆರ್ರಿ ಹಣ್ಣುಗಳಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್‌ಗಳು, ನಾರಿನಂಶ ಇವೆಲ್ಲಾ ಇದ್ದು ದಿನಾ ಸ್ವಲ್ಪ ಬೆರ್ರಿ ಹಣ್ಣುಗಳನ್ನು ತಿನ್ನಬಹುದು. ಬೆರ್ರಿ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ.
                    ಪಪ್ಪಾಯಿ ಪಪ್ಪಾಯಿ ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ. ದಿನಾ ಸ್ವಲ್ಪ ಪಪ್ಪಾಯಿ ತಿನ್ನುವುದರಿಂದ ಜೀವ ಕಣಗಳಿಗೆ ಹಾನಿಯುಂಟಾಗುವುದನ್ನು ತಡೆಗಟ್ಟಬಹುದು. 
             ಸ್ಟಾರ್‌ ಫ್ರೂಟ್‌ ಹುಳಿ, ಸಿಹಿ ಮಿಶ್ರಿತ ಈ ಹಣ್ಣಿನಲ್ಲಿ ವಿಟಮಿನ್‌ ಸಿ ಹಾಗೂ ನಾರಿನಂಶ ಹೇರಳವಾಗಿದೆ. ಇದು ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಂತೆ ತಡೆಗಟ್ಟುವುದರ ಜೊತೆಗೆ ಉರಿಯೂತದ ಸಮಸ್ಯೆ ಕೂಡ ಉಂಟಾಗುವುದಿಲ್ಲ. 
              ಕಿವಿ ಹಣ್ಣು ಕಿವಿ ಹಣ್ಣಿನಲ್ಲಿ ವಿಟಮಿನ್‌ ಇ, ಕೆ ಹಾಗೂ ಪೊಟಾಷ್ಯಿಯಂ ಇದ್ದು ಇದರಲ್ಲಿ ಸಕ್ಕರೆಯಂಶ ಕೂಡ ಕಡಿಮೆ ಇದೆ. ಇದು ಡಯಾಬಿಟಿಕ್‌ ಫ್ರೆಂಡ್ಲಿ ಹಣ್ಣಾಗಿದೆ. 
                ಕರ್ಬೂಜ, ಕಲ್ಲಂಗಡಿ ಹಣ್ಣು ಈ ಹಣ್ಣುಗಳಲ್ಲಿ ನಾರಿನಂಶ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ, ವಿಟಮಿನ್‌ ಬಿ, ಸಿ ಇದ್ದು ಇದನ್ನು ಮಿತಿಯಲ್ಲಿ ತಿಂದರೆ ಯಾವುದೇ ತೊಂದರೆಯಿಲ್ಲ. ಆದರೆ ಈ ಹಣ್ಣುಗಳನ್ನು ಸಕ್ಕರೆ ಹಾಕಿ ಜ್ಯೂಸ್‌ ಮಾಡಿ ಕುಡಿಯಬೇಡಿ.
             ಡ್ರ್ಯಾಗನ್‌ ಫ್ರೂಟ್‌ ಡ್ರ್ಯಾಗನ್ ಹಣ್ಣುಗಳಲ್ಲಿ ನಾರಿನಂಶ, ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ಗಳಿದ್ದು ಮಧುಮೇಹಿಗಳು ತಮ್ಮ ಆಹಾರಕ್ರಮದಲ್ಲಿ ಸೇರಿಸಬಹುದಾದ ಹಣ್ಣಾಗಿದೆ.                ಪಿಯರ್ ಹಣ್ಣು ಪಿಯರ್ ಹಣ್ಣು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಇದನ್ನು ತಿನ್ನುವುದರಿಂದ ಮಧುಮೇಹದಂಥ ಅಪಾಯ ತಡೆಗಟ್ಟಬಹುದು ಎಂದು ಅಧ್ಯಯನಗಳು ಕೂಡ ಹೇಳಿವೆ. 
      ಕಿತ್ತಳೆ ಹಣ್ಣು ಈ ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಈ ಹಣ್ಣುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಬಹುದಾಗಿದೆ. 
          ಮಧುಮೇಹಿಗಳು ಹಣ್ಣುಗಳನ್ನು ಆಹಾರಕ್ರಮದಲ್ಲಿ ಹೇಗೆ ಸೇರಿಸಬೇಕು? ನೀವು ಫ್ರೂಟ್‌ ಸಲಾಡ್‌ ಮಾಡಿ ಅದರ ಮೇಲೆ ಸ್ವಲ್ಪ ಚಕ್ಕೆ ಪುಡಿ ಹಾಕಿ ತಿನ್ನಬಹುದು. ಹೀಗೆ ಮಾಡಿದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚುವುದಿಲ್ಲ. ಇನ್ನು ಹಣ್ಣುಗಳ ಜೊತೆ ವಾಲ್ನಟ್, ನಟ್ಸ್‌ ಇವುಗಳನ್ನು ಸೇರಿಸಿ ಸವಿಯಬಹುದು. ಹಣ್ಣುಗಳ ಜೊತೆ ಫ್ಲ್ಯಾಕ್ಸಿ ಸೀಡ್ (ಅಗಸೆ ಬೀಜ) ಸೇರಿಸುವುದರಿಂದ ದೇಹದಲ್ಲಿ ಗ್ಲೈಸೆಮಿಕ್‌ ಪ್ರಮಾಣ ಸಮತೋಲನದಲ್ಲಿ ಇಡಬಹುದು.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries