ತಿರುವನಂತಪುರ: ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ಮರಣದ ಬಗ್ಗೆ ಮಲೆಯಾಳಂ ನಟ ಮೋಹನ್ ಲಾಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪುನೀತ್ ಜೊತೆ ಕನ್ನಡ ಮೈತ್ರಿ ಎಂಬ ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದಾರೆ.
‘ಪುನೀತ್ ಮರಣವಾರ್ತೆಯನ್ನು ನಂಬಲಾಗುತ್ತಿಲ್ಲ. ಹಲವು ವರ್ಷಗಳಿಂದ ನನಗೆ ಪುನೀತ್ ಬಗ್ಗೆ ತಿಳಿದಿರುವೆ. ಅವರ ತಂದೆ ರಾಜ್ ಕುಮಾರ್ ಜೊತೆ ನನಗೆ ಹತ್ತಿರ ಸಂಪರ್ಕವಿತ್ತು. ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ಗೊತ್ತಿಲ್ಲ. ಒಂದು ಅತ್ಯುತ್ತಮ ನಟನ್ ಪುನೀತ್’ ಎಂದು ಮೋಹನ್‍ಲಾಲ್ ಹೇಳಿದರು.
ಕನ್ನಡ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಯಾದ ಪುನೀತ್ ರಾಜ್ ಕುಮಾರ್. ಏಪ್ರಿಲ್‍ನಲ್ಲಿ ಬಿಡುಗಡೆಯಾದ ಯುವರತ್ನ ಅವರು ನಟಿಸಿದ ಕೊನೆಯ ಚಿತ್ರ.




