HEALTH TIPS

ವೈರಲ್‌ ಆಗ್ತಿದೆ ಐಸ್‌ಕ್ರೀಮ್‌ ಸ್ಟಿಕ್‌ನಲ್ಲಿ ಇಡ್ಲಿ ಜೊತೆ ಚಟ್ನಿ, ಸಾಂಬಾರ್‌

              ಆಹಾರದಲ್ಲಿ, ಬಗೆ ಬಗೆಯ ರೆಸಿಪಿಗಳಲ್ಲಿ ವೈವಿಧ್ಯತೆ ಮತ್ತು ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಆದರೆ ಕೆಲವು ಪ್ರಯತ್ನಗಳು ಜನರನ್ನು ಹೆಚ್ಚು ಹಾಗೂ ಬಹುಬೇಗ ಆಕರ್ಷಿಸುತ್ತದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆದ ತಿಂಡಿಯೊಂದರ ಬಗ್ಗೆ ನಿಮಗೆ ಹೇಳಲಿದ್ದೇವೆ.


                ಬೆಂಗಳೂರಿನ ರೆಸ್ಟೋರೆಂಟ್‌ ಒಂದರಲ್ಲಿ ಐಸ್‌ ಕ್ರೀಮ್‌ ವಿನ್ಯಾಸದ ಇಡ್ಲಿಯನ್ನು ತಯಾರಿಸಿ ವಿಭಿನ್ನತೆ ತೋರಿದೆ. ಎಂಥವರಿಗೂ ನೋಡಿದಾಕ್ಷಣ ಇದು ಇಡ್ಲಿನಾ ಅಥವಾ ಐಸ್‌ ಕ್ರೀಮಾ ಎಂದು ಸಂಶಯ ಬಾರದೆ ಇರದು!. ನೀವು ಇದರ ರುಚಿ ನೋಡುವವರೆಗೂ ಇದನ್ನು ಇಡ್ಲಿ ಎಂದು ನೀವು ನಂಬುವುದಕ್ಕೆ ಸಾಧ್ಯವೇ ಇಲ್ಲ.

          ಹೌದು, ಗ್ರಾಹರನ್ನು ಸೆಳೆಯುವ ದೃಷ್ಟಿಯಿಂದ ಬೆಂಗಳೂರಿನ ರೆಸ್ಟೋರೆಂಟ್‌ ಒಂದರಲ್ಲಿ "ಸೇವರಿ ರೈಸ್‌ ಕೇಕ್‌" ರೆಸಿಪಿ ವಿಭಿನ್ನವಾಗಿ ತಯಾರಿಸಿದ್ದಾರೆ. ಚಟ್ನಿ ಹಾಗೂ ಸಾಂಬಾರ್‌ ಜೊತೆಗೆ ಐಸ್‌ಕ್ರೀಮ್‌ನಂತೆ ಕಾಣುವ ಈ ಇಡ್ಲಿಯನ್ನು ನೋಡಲು ವಿಚಿತ್ರ ಎನಿಸುತ್ತದೆ. ಗ್ರಾಹರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸೇವರಿ ರೈಸ್‌ ಕೇಕ್‌ ಭಾರೀ ವೈರಲ್‌ ಆಗಿದೆ. ಇದಕ್ಕೆ ಜನರು ತಮ್ಮ ಕಮೆಂಟ್‌ಗಳ ಮೂಲಕ ವಿಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆವಿಷ್ಕಾರ ಹಾಗೂ ತಂತ್ರಜ್ಞಾನ ಎರಡರ ಮಿಶ್ರಣ ಈ ಇಡ್ಲಿ. ಬೆಂಗಳೂರು ಸದಾ ಫುಡ್‌ ಇನ್ನೋವೆಷನ್‌ನಲ್ಲಿ ಬೆಸ್ಟ್‌ ಎಂದು ಜನರು ಕಮೆಂಟ್‌ ಮಾಡುತ್ತಿದ್ದಾರೆ. ಬಹುತೇಕರಿಗೆ ಈ ವಿಶಿಷ್ಟ ಪ್ರಯೋಗ ಇಷ್ಟವಾದರೆ, ಕೆಲವರು ಇಡ್ಲಿ ಈಗಲೇ ಚೆನ್ನಾಗಿದೆ, ವಿಭಿನ್ನತೆ ಎಂದು ಹೇಳಿ ಇದನ್ನು ಹಾಳು ಮಾಡಬೇಡಿ ಎಂದು ಸಹ ತಮ್ಮ ಪ್ರತಿಕ್ರಿಯೆ ಹೇಳಿದ್ದಾರೆ.
                ಏನೇ ಆದರೂ ಹೊ ಹೊಸ ಪ್ರಯತ್ನಗಳು ಮಾತ್ರ ಸದಾ ನಿರಂತರ. ನೀವು ಮನೆಯಲ್ಲಿ ಮಾಡಿ ನೋಡಿ, ಮಕ್ಕಳಿಗೆ ಖಂಡಿತ ಇಷ್ವವಾಗುತ್ತದೆ. ಸಾಧ್ಯವಾದರೆ ರೆಸ್ಟೋರೆಂಟ್‌ಗೆ ಭೇಟಿ ನೀಡಿ ಈ ವಿಭಿನ್ನ ಇಡ್ಲಿಯನ್ನು ಸವಿಯಿರಿ.


Totally like the idea of stick-idli but will stick with tradition thank you; as per @krishashok interview in mojorojo YT channel yday, taste = flavor + ability to feel texture of idli with hand while mixing with sambar + win-win mentality.
Mahendrakumar
@BrotherToGod
Innovative food technology of how the Idli got attached to the Ice cream stick. Bengaluru and it's food innovations are always synonymous! @vishalk82
Image
4
Share this Tweet
Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries