HEALTH TIPS

ಪೂರ್ವ ಲಡಾಖ್ ಗಡಿಯಲ್ಲಿ ತನ್ನ ಅಸ್ತಿತ್ವ ಸ್ಥಾಪನೆಗೆ ಚೀನಾದ ಸ್ಕೆಚ್!?

             ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಪೂರ್ವ ಲಡಾಖ್ ಪ್ರದೇಶದಲ್ಲಿ ಹೊಸ ಮೂಲಸೌಕರ್ಯ ಅಭಿವೃದ್ಧಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಚೀನಾ ಸೇನೆಯನ್ನು ನಿಯೋಜನೆ ಮಾಡುತ್ತಿದೆ. ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಪ್ರತಿಯೊಂದು ಚಟುವಟಿಕೆಗಳ ಮೇಲೆ ಭಾರತೀಯ ಸೇನೆಯು ಲಕ್ಷ್ಯ ವಹಿಸಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಹೇಳಿದ್ದಾರೆ.


            ಚೀನಾದ ಸೇನೆಯು ಎರಡನೇ ಚಳಿಗಾಲದ ವೇಳೆಗೆ ನಿಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ವಹಿಸಲು ಶುರು ಮಾಡಿದರೆ, ಅದು ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿ ಇರುವಂತೆ ಸಕ್ರಿಯ ನಿಯಂತ್ರಣ ರೇಖೆಯಲ್ಲದಿದ್ದರೂ ಅದೇ ರೀತಿಯ ಪರಿಸ್ಥಿತಿಗೆ (ನಿಯಂತ್ರಣ ರೇಖೆ) ಕಾರಣವಾಗುತ್ತದೆ. ಪ್ರಸ್ತುತ ಎರಡು ಗಡಿ ನಿಯಂತ್ರಣ ರೇಖೆಯಲ್ಲಿ 50,000 ದಿಂದ 60,000 ಯೋಧರನ್ನು ನಿಯೋಜನೆ ಮಾಡಲಾಗಿದೆ.

                "ಒಂದು ವೇಳೆ ಚೀನಾದ ಸೇನೆಯು ತನ್ನ ಸೇನಾ ನಿಯೋಜನೆ ಹೆಚ್ಚಿಸುವುದನ್ನು ಮುಂದುವರಿಸಿದರೆ, ಭಾರತೀಯ ಸೇನೆಯು ಕೂಡ ತನ್ನ ವ್ಯಾಪ್ತಿಯಲ್ಲಿ ಅಸ್ತಿತ್ವವನ್ನು ತೋರಿಸಿಕೊಳ್ಳಬೇಕಾಗುತ್ತದೆ, ಅದು ಪೀಪಲ್ಸ್ ಲಿಬರೇಶನ್ ಆರ್ಮಿಯಷ್ಟೇ ಉತ್ತಮವಾಗಿರುತ್ತದೆ," ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ತಿಳಿಸಿದ್ದಾರೆ.


                  ಉಭಯ ರಾಷ್ಟ್ರಗಳ ಗಡಿಯಲ್ಲಿ ಸೇನೆ ನಿಷ್ಕ್ರಿಯತೆ ಒಪ್ಪಂದ

           ಭಾರತ ಮತ್ತು ಚೀನಾದ ಸೇನಾಪಡೆಗಳು ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯು(ಎಲ್‌ಎಸಿ) ಎರಡೂ ಸೇನೆ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ಕಳೆದ 17 ತಿಂಗಳುಗಳಿಂದ ಉಭಯ ಸೇನೆಗಳ ನಡುವಿನ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದ ವಿವಾದಿತ ಪ್ರದೇಶದಲ್ಲಿ ಸೇನೆ ನಿಷ್ಕ್ರಿಯತೆಗೆ ಸೇನೆಗಳು ಸಮ್ಮತಿಸಿದ್ದವು. ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆದ ಸಂಧಾನ ಮಾತುಕತೆ ಫಲವಾಗಿ ವಿವಾದಿತ ಸ್ಥಳಗಳಿಂದ ಎರಡು ರಾಷ್ಟ್ರಗಳು ತಮ್ಮ ಸೇನೆಗಳನ್ನು ವಾಪಸ್ ಕರೆಸಿಕೊಂಡಿದ್ದವು.

                   ಚೀನಾ ಮೂಲಸೌಕರ್ಯ ಅಭಿವೃದ್ಧಿ ಮೇಲೆ ಕಣ್ಣು

             "ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯವನ್ನು ನಡೆಸಲಾಗುತ್ತಿದೆ. ಇದು ಕಳವಳಕಾರಿ ಬೆಳವಣಿಗೆಯಾಗಿದೆ. ಚೀನಾದ ರೀತಿಯಲ್ಲೇ ಭಾರತವೂ ಕೂಡ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕಾಗುತ್ತದೆ. ಏಕೆಂದರೆ ಚೀನಾ ಬೃಹತ್ ನಿರ್ಮಾಣ ಚಟುವಟಿಕೆಗಳನ್ನು ಗಡಿಯಲ್ಲಿ ನಡೆಸುತ್ತಿದೆ ಎಂದರೆ, ಅವರು ಅದೇ ಪ್ರದೇಶದಲ್ಲಿ ತಂಗುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಂದರೆ ಭಾರತವೂ ಸಹ ಅಷ್ಟೇ ವೆಚ್ಚದಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ನಡೆಸುತ್ತದೆ. ಭಾರತ ಮೂಲಸೌಕರ್ಯ ಅಭಿವೃದ್ದಿಯಲ್ಲಿ ಚೀನಾಗಿಂತಲೂ ಉತ್ತಮ ಸ್ಥಿತಿಯಲ್ಲಿದೆ," ಎಂದು ನಾರವಾನೆ ಹೇಳಿದ್ದಾರೆ.

                    ಪಶ್ಚಿಮ ಗಡಿ ಪ್ರದೇಶದಲ್ಲಿ ಸಕ್ರಿಯ ನಿಯಂತ್ರಣ ರೇಖೆ

            ಎರಡನೇ ಚಳಿಗಾಲದ ಅವಧಿ ವೇಳೆಗೆ ಚೀನಾ ತನ್ನ ಸೇನೆಯ ಚಟುವಟಿಕೆಗಳನ್ನು ಮುಂದುವರಿಸಿದರೆ, ಖಂಡಿತವಾಗಿಯೂ ಅದು ಸಕ್ರಿಯ ನಿಯಂತ್ರಣ ರೇಖೆ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಪಶ್ಚಿಮ ಗಡಿ ಪ್ರದೇಶದಲ್ಲಿ ಚೀನಾದ ರೀತಿಯಲ್ಲಿ ಹೆಚ್ಚಿನ ಸೇನೆ ನಿಯೋಜಿಸುವುದಿಲ್ಲ, ಆದರೆ ಖಂಡಿಯವಾಗಿಯೂ ನಾವು ಚೀನಾದ ಸೇನಾ ಚಟುವಟಿಕೆಗಳ ಮೇಲೆ ನಿರಂತರ ಕಣ್ಣು ಇಟ್ಟಿರುತ್ತೇವೆ ಎಂದು ತಿಳಿಸಿದ್ದಾರೆ.

                                   "ಚೀನಾ ಲೆಕ್ಕಾಚಾರವೇ ಅರ್ಥವಾಗುತ್ತಿಲ್ಲ"

           ಇಡೀ ಜಗತ್ತು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ನರಳುತ್ತಿದೆ, ಚೀನಾದ ಪೂರ್ವ ಸಮುದ್ರ ತೀರದಲ್ಲಿಯೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಮಧ್ಯೆಯದಲ್ಲಿ ಚೀನಾ ಗಡಿ ಪ್ರದೇಶದಲ್ಲಿ ಸಂಘರ್ಷಕ್ಕೆ ಏಕೆ ಕಾರಣವಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗುತ್ತಿದೆ. ಈ ಸಂದರ್ಭದಲ್ಲಿ ಇನ್ನೊಂದು ದಿಕ್ಕಿನಲ್ಲಿ ಚೀನಾವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವಾಗಿದೆ. ಆದರೆ ಅದೇನೇ ಆಗಿರಲಿ, ಭಾರತೀಯ ಸಶಸ್ತ್ರ ಪಡೆಗಳ ಕ್ಷಿಪ್ರ ಪ್ರತಿಕ್ರಿಯೆಯಿಂದಾಗಿ ಅವರು ಚೀನಾ ಲೆಕ್ಕಾಚಾರಗಳು ಉಲ್ಟಾ ಹೊಡೆದಿವೆ ಎಂದು ನಾನು ಭಾವಿಸುತ್ತೇನೆ, "ಎಂದು ಅವರು ಹೇಳಿದರು.

                 ಪೂರ್ವ ಲಡಾಖ್ ಒಟ್ಟಾರೆ ಪರಿಸ್ಥಿತಿ ಬಗ್ಗೆ ಪ್ರಶ್ನೆಗೆ ನಾರವಾನೆ ಉತ್ತರಿಸಿದ್ದಾರೆ. "ಉತ್ತರ ಲಡಾಖ್ ಪ್ರದೇಶದಲ್ಲಿ ಬೃಹತ್ ನಿರ್ಮಾಣ ಕಾಮಗಾರಿ ಮತ್ತು ನಿರ್ಮಾಣ ಕಾರ್ಯಗಳಿಂದ ಏನಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಆದ್ದರಿಂದ ಚೀನಾ ಸೇನಾ ಚಟುವಟಿಕೆಗು ಪ್ರಚೋದನೆಯ ಸ್ಪಷ್ಟ ಸಂದೇಶ ಎಂದು ಅವರು ಹೇಳಿದ್ದಾರೆ. ಕಳೆದ ಒಂದು ವರ್ಷದಲ್ಲಿ ಆಧುನೀಕರಣವೇ ನಮ್ಮ ಗುರಿಯಾಗಿದ್ದು, ಅದೇ ರೀತಿ ಭವಿಷ್ಯಕ್ಕಾಗಿ ನಮಗೆ ಬೇಕು ಎಂದು ನಾವು ಭಾವಿಸಿದ ಇತರ ಆಯುಧಗಳು ಮತ್ತು ಸಲಕರಣೆಗಳು ನಮ್ಮ ಗಮನ ಸೆಳೆದಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries