HEALTH TIPS

ಇಂದು ವಿಶ್ವ ಪ್ರಾಣಿ ಸಂರಕ್ಷಣಾ ದಿನ: ಮೂಕ ಜೀವಿಗಳಿಗೂ ಬದುಕುವ ಅವಕಾಶ ಮಾಡಿಕೊಡೋಣ

            ಇಂದು ವಿಶ್ವ ಪ್ರಾಣಿ ಕಲ್ಯಾಣ ದಿನ. ಪ್ರಾಣಿಗಳ ಸಂರಕ್ಷಣೆಯ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಅಕ್ಟೋಬರ್ 4 ರಂದು ಅಂತಾರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ನಿಲ್ಲಿಸಿ, ಅವುಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ದಿನ ಬಹಳ ಮಹತ್ವದ್ದಾಗಿದೆ. ಈ ದಿನದ ಕುರಿತು ನೀವು ತಿಳಿದುಕೊಳ್ಳಬೇಕಾದ ಮತ್ತಷ್ಟು ವಿಚಾರಗಳು ಇಲ್ಲಿವೆ.


                 ವಿಶ್ವ ಪ್ರಾಣಿ ಕಲ್ಯಾಣ ದಿನದ ಇತಿಹಾಸ: ಪ್ರಾಣಿ ಪೋಷಕ ಸಂತ ಎಂದು ಕರೆಯಲ್ಪಡುವ ಸೇಂಟ್ ಫ್ಯಾನ್ಸಿಸ್ ಆಫ್ ಅಸ್ಸಿಸಿಯ ಗೌರವಾರ್ಥವಾಗಿ ವಿಶ್ವ ಪ್ರಾಣಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲಿಗೆ 1925ರಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ಈ ದಿನವನ್ನು ಆಚರಿಸಲಾಯಿತು. ಹೆನ್ರಿಕ್ ಜಿಮ್ಮರ್ಮ್ಯಾನ್ ಈ ಕಾರ್ಯಕ್ರಮವನ್ನು ಮೊದಲಿಗೆ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 5,000 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಬಳಿಕ ಇಟಲಿಯ ಫ್ಲೋರೆನ್ಸಿನಲ್ಲಿ 1931 ರಲ್ಲಿ ಪರಿಸರ ವಿಜ್ಞಾನಿಗಳು ನಡೆಸಿದ ಸಮಾವೇಶದಲ್ಲಿ ಸೇಂಟ್ ಫ್ರಾನ್ಸಿಸ್ ಜಯಂತಿಯಂದೇ ಅಂದರೆ ಅಕ್ಟೋಬರ್‌ 4ರಂದೇ ವಿಶ್ವ ಪ್ರಾಣಿ ಸಂರಕ್ಷಣಾ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದ್ದರು. ಅಂದಿನಿಂದ ಈ ದಿನವನ್ನು ಪ್ರಪಂಚದಾದ್ಯಂತ ಅಳಿವಿನಂಚಿನಲ್ಲಿರುವ ಜೀವಿಗಳ ಹಾಗೂ ಎಲ್ಲ ಜೀವಿಗಳ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

                    2021ರ ವಿಶ್ವ ಪ್ರಾಣಿ ಸಂರಕ್ಷಣಾ ದಿನ ಥೀಮ್: ಪ್ರತಿವರ್ಷ ವಿಭಿನ್ನ ವಿಚಾರದೊಂದಿಗೆ ಈ ವಿಶ್ವ ಪ್ರಾಣಿ ಸಂರಕ್ಷಣಾ ದಿನವನ್ನು ಆಚರಣೆ ಮಾಡಲಾಗತ್ತದೆ. ಅದೇ ರೀತಿ ಈ ವರ್ಷದ ಅಂದ್ರೆ 2021 ರ ವಿಶ್ವ ಪ್ರಾಣಿಗಳ ದಿನದ ವಿಷಯವೆಂದರೆ "ಅರಣ್ಯಗಳು ಮತ್ತು ಜೀವನೋಪಾಯಗಳು: ಜನರು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದಾಗಿದೆ''. ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಿಧ ಕಾರ್ಯಕ್ರಮಗಳನ್ನು ಈ ವರ್ಷ ಹಮ್ಮಿಕೊಳ್ಳಲಾಗುತ್ತದೆ.
              ವಿಶ್ವ ಪ್ರಾಣಿ ದಿನದ ಮಹತ್ವ: ಪ್ರಾಣಿಗಳು ಮನುಷ್ಯ ಮತ್ತು ಸಸ್ಯಗಳಂತೆ ನಮ್ಮ ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿವೆ. ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವುದರಿಂದ ಹಿಡಿದು ಮಾನವ ಸ್ವಾಸ್ಥ್ಯವನ್ನು ತರುವವರೆಗೆ ಪ್ರಾಣಿಗಳ ಪಾತ್ರ ಬಹಳ ನಿರ್ಣಾಯಕವಾಗಿವೆ. ಆದರೆ ಇಂದು ಅವುಗಳ ಪರಿಸ್ಥಿತಿ ಬಹಳ ಶೋಚನೀಯ. ತನ್ನ ಸ್ವಾರ್ಥಕ್ಕಾಗಿ ಪ್ರಾಣಿಗಳನ್ನು ಬಲಿಕೊಡುವ ಮನುಷ್ಯ, ಪ್ರಾಣಿಗಳ ಅಳಿವಿಗೆ ಕಾರಣವಾಗುತ್ತಿದ್ದಾನೆ. ಆದ್ದರಿಂದ ಇದನ್ನು ತಡೆದು, ಅವುಗಳನ್ನು ಸಂರಕ್ಷಿಸುವ ಅಗತ್ಯವನ್ನು ಸಾರಿ ಹೇಳುವ ದಿನವೇ ಈ ಪ್ರಾಣಿ ಸಂರಕ್ಷಣಾ ಅಥವಾ ಕಲ್ಯಾಣ ದಿನ.
            ವಿಶ್ವ ಪ್ರಾಣಿ ದಿನದ ಆಚರಣೆ: ಈ ದಿನದ ವಿಶ್ವವ್ಯಾಪಿ ಆಚರಣೆಗಳನ್ನು ಯುಕೆ ಮೂಲದ ನೇಚರ್‌ವಾಚ್ ಫೌಂಡೇಶನ್ ಎಂಬ ಸಂಸ್ಥೆ ಪ್ರಾಯೋಜಿಸುತ್ತದೆ. ನೇಚರ್‌ವಾಚ್ ಫೌಂಡೇಶನ್ ಒಂದು ನಿಧಿಸಂಗ್ರಹಣೆ ಸಂಸ್ಥೆಯಾಗಿದ್ದು, ಅದು ಪ್ರಾಣಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಹಣವನ್ನು ಸಂಗ್ರಹಿಸುತ್ತದೆ. ವಿಶ್ವ ಪ್ರಾಣಿ ದಿನದ ಅಂಗವಾಗಿ ಪ್ರಾಣಿಗಳ ರಕ್ಷಣೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಜನರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.


           


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries