ನವದೆಹಲಿ: ಜಿಎಸ್‌ಟಿ ಜಾರಿಯಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 44,000 ಕೋಟಿ ರೂ.ಮಂಜೂರುಗೊಳಿಸಿದ್ದು, ಕೇರಳಕ್ಕೆ 2418.49 ಕೋಟಿ ರೂ.ಲಭ್ಯವಾಗಲಿದೆ.
ಜುಲೈ 15, 2021 ರಂದು 75,000 ಕೋಟಿ ಮತ್ತು ಅಕ್ಟೋಬರ್ ನಲ್ಲಿ 40,000 ಕೋಟಿ ರೂ. ಮಂಜೂರುಗೊಳಿಸಿತ್ತು. ಇದರೊಂದಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ಸೌಲಭ್ಯಗಳ ಮೂಲಕ ವಿತರಿಸಲಾದ ಒಟ್ಟು ಮೊತ್ತ 1,59,000 ಕೋಟಿ ರೂ.ಗೆ ತಲುಪಿದೆ.
ಕರ್ನಾಟಕ 5010.90 ಕೋಟಿ, ಗುಜರಾತ್ 3608.53 ಕೋಟಿ, ಮಹಾರಾಷ್ಟ್ರ 3814 ಕೋಟಿ, ಪಂಜಾಬ್ 3357.48 ಕೋಟಿ, ರಾಜಸ್ಥಾನ 2011.42 ಕೋಟಿ, ತಮಿಳುನಾಡು 2240.22 ಕೋಟಿ ಮತ್ತು ತೆಲಂಗಾಣ 1264.78 ಕೋಟಿ ಪಡೆದಿವೆ.
ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಗುವ ನಷ್ಟವನ್ನು ಸರಿದೂಗಿಸಲು ಸಾಲ ಸೌಲಭ್ಯದಡಿ ಹೆಚ್ಚುವರಿ ಮೊತ್ತವನ್ನು ಮಂಜೂರು ಮಾಡಲಾಗಿದೆ. ಇದು ತೆರಿಗೆ ಸಂಗ್ರಹದಿಂದ ಪ್ರತಿ 2 ತಿಂಗಳಿಗೊಮ್ಮೆ ಅನುಮತಿಸುವ ಪ್ರಮಾಣಿತ ಪರಿಹಾರಕ್ಕೆ ಹೆಚ್ಚುವರಿಯಾಗಿದೆ.



