HEALTH TIPS

ನಾಲ್ಕು ವರ್ಷಗಳು, 1153 ಸಂದೇಶಗಳು; ಅಪ್ರತಿಮ ದಾಖಲೆ ಸಾಧನೆಯೊಂದಿಗೆ ಪಿ.ಕೆ.ರಾಜೀವ್

                                                    

                  ಕೊಚ್ಚಿ: ಸ್ವಂತ ಹೆಸರಿನಲ್ಲಿ ದಾಖಲೆ ಎಂಬುದು ಬಹುತೇಕರ ಕನಸು. ಆದರೆ ದಾಖಲೆ ಮಾಡುವುದು ಸುಲಭದ ಮಾತಲ್ಲ. ವರ್ಷಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ದಾಖಲೆಗಳನ್ನು ಸಾಧಿಸಬಹುದು. ಇತ್ತೀಚೆಗೆ ಕೇರಳದ ವ್ಯಕ್ತಿಯೊಬ್ಬರು ಇಂಡಿಯಾ ಬುಕ್ಸ್ ಆಫ್ ರೆಕಾಡ್ರ್ಸ್‍ಗೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

            ಎರ್ನಾಕುಳಂನ ಪೆರುಂಬವೂರು ಮೂಲದ ಪಿ.ಕೆ.ರಾಜೀವ್ ಈ ದಾಖಲೆಯನ್ನು ಮಾಡಿದವರು. ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಸ್ಥಾನ ಪಡೆಯಲು ಅವರು ಒಂದು ದಿನ ಅಥವಾ ಎರಡು ದಿನಗಳನ್ನು ಮೀಸಲಿಡಲಿಲ್ಲ. ಸತತ 1153 ದಿನಗಳ ಕಾಲ ಶ್ರಮಿಸಿ ದಾಖಲೆ ಬರೆದಿದ್ದಾರೆ. ಅವರು ತಮ್ಮ ಪ್ರಯತ್ನಗಳ ಮೂಲಕ ಅನೇಕರನ್ನು ಪ್ರೇರೇಪಿಸುತ್ತಾರೆ. ಸಮಯ ವ್ಯರ್ಥ ಮಾಡುವವರು ಎಂದು ನಾವೆಲ್ಲ ಕರೆಯುವ ಸಾಮಾಜಿಕ ಜಾಲತಾಣಗಳ ಬಳಕೆ ಅವರ ದಾಖಲೆ ಸಾಧನೆಗೆ ಕಾರಣ.

                  ಕಳೆದ ನಾಲ್ಕು ವರ್ಷಗಳಿಂದ, ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಅತೀ ಹೆಚ್ಚು ಮೋಟಿವೇಶನ್ ಕ್ಯಾಲೆಂಡರ್ ಸಂದೇಶಗಳನ್ನು ತಯಾರಿಸಿ ಹಂಚುವುದು ರಾಜೀವ್ ಅವರ ತಪಸ್ಸಿನಂತಹ ಚಟುವಟಿಕೆಯಾಗಿದ್ದು ಭಾರತದ ಬುಕ್ಸ್ ಆಫ್ ರೆಕಾರ್ಡ್ ಗುರುತಿಸುವಂತೆ ಮಾಡಿತು.1153 ಮೆಸೇಜುಗಳನ್ನು ಒಂದು ಟ್ಯಾಬ್ಲೆಟ್ ನಲ್ಲಿ ರಚಿಸಿದ್ದು ಭಾರತದಲ್ಲೇ ದಾಖಲೆಯಾಗಿ ಗಮನಾರ್ಹವಾಯಿತು. ಪ್ರತಿನಿತ್ಯ ರಾಜೀವ್ ರಚಿಸಿದ ಕ್ಯಾಲೆಂಡರ್ ಸಂದೇಶಗಳನ್ನು ಸಾವಿರಾರು ಜನರು ಹಂಚಿಕೊಳ್ಳುತ್ತಾರೆ. ದಿನಕ್ಕೊಂದು ಪ್ರೇರಣೆ ನೀಡುತ್ತಿರುವ ರಾಜೀವ್  ಇಂಡಿಯಾ ಬುಕ್ಸ್ ಆಫ್ ರೆಕಾಡ್ರ್ಸ್ ಗೆ ಸೇರ್ಪಡೆಗೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ರಾಜೀವ್ ಅವರನ್ನು ಅಭಿನಂದಿಸಲು ಹಲವರು ಮುಂದೆ ಬಂದಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries