HEALTH TIPS

ನ.15 ರಂದು ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಭೆ

              ಅಮರಾವತಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನ.15 ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. 

               ಕೋವಿಡ್-19 ಎರಡನೇ ಅಲೆಯ ನಂತರದಲ್ಲಿ ದೇಶದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿದ್ದು, ಹೂಡಿಕೆ, ಮೂಲಸೌಕರ್ಯ ಸ್ಥಾಪನೆಗೆ ಸಂಬಂಧಿಸಿದಂತೆ, ಚರ್ಚೆ ಮಾಡಲಿದ್ದಾರೆ. 

              ವರ್ಚ್ಯುಯಲ್ ಮೋಡ್ ನಲ್ಲಿ ಮಧ್ಯಾಹ್ನ 3 ರಿಂದ 6 ಗಂಟೆಗೆ ಸಭೆ ನಡೆಯಲಿದೆ. ಎರಡನೇ ಅಲೆಯ ಬಳಿಕ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬಂದಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಚಟುವಟಿಕೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶದಲ್ಲಿರುವ ಆಡಳಿತಗಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

             ಹೂಡಿಕೆದಾರರಲ್ಲಿ ಸಾಮಾನ್ಯವಾಗಿ ಸಕಾರಾತ್ಮಕತೆ ಇದ್ದು, " ಈ ಹೆಚ್ಚುತ್ತಿರುವ ಆಶಾವಾದದ ಲಾಭವನ್ನು ಪಡೆದುಕೊಂಡಲ್ಲಿ ನಾವು ರಾಜ್ಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದಾಗಿದೆ ಈ ಮೂಲಕ ಉದ್ಯೋಗ ಬೆಳವಣಿಗೆ ಹಾಗೂ ಆದಾಯದ ಮೇಲೆ ದ್ವಿಗುಣ ಪರಿಣಾಮವನ್ನು ಕಾಣಬಹುದಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ. 

              ನ.15 ರ ಸಂವಾದ ರಾಜ್ಯ ನಿರ್ದಿಷ್ಟ ಆರ್ಥಿಕತೆಯ ಕೇಂದ್ರಿತವಾಗಿರಲಿದೆ. ಆರ್ಥಿಕತೆಗೆ ಸಂಬಂಧಿಸಿದ ಸವಾಲುಗಳು ಹಾಗೂ ಸಾಮರ್ಥ್ಯದ ಬಗ್ಗೆ, ಹೂಡಿಕೆ, ಮೂಲಸೌಕರ್ಯ ಬೆಳವಣಿಗೆಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ-ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಸಾಧಿಸುವುದಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಈ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries