HEALTH TIPS

ಗೋಸಾಡ ಶ್ರೀಮಹಿಷಮರ್ಧಿನಿ ಕ್ಷೇತ್ರದಲ್ಲಿ ಶ್ರೀಭೂತಬಲಿ ಉತ್ಸವ 19 ರಿಂದ

               ಮುಳ್ಳೇರಿಯ: ಗೋಸಾಡ ಶ್ರೀಮಹಿಷಮರ್ಧಿನಿ ಕ್ಷೇತ್ರದ ವಾರ್ಷಿಕ ಶ್ರೀಭೂತಬಲಿ ಉತ್ಸವ ನ.19 ಹಾಗೂ 20 ರಂದು ನಡೆಯಲಿದೆ.

               ಕಾರ್ಯಕ್ರಮದ ಪೂರ್ವಭಾವಿಯಾಗಿ ನ.18 ರಂದು ಸಂಜೆ 4ಕ್ಕೆ ಬಲಿವಾಡು ಕೂಟಕ್ಕೆ ಬಲಿವಾಡು ಸಂಗ್ರಹ ಮತ್ತು ಶ್ರೀಕ್ಷೇತ್ರದಿಂದ ಭಕ್ತರಿಗೆ ನೀಡಲಾದ ಕಾಣಿಕೆ ಹುಂಡಿಗಳಿಂದ ಮನೆ ಕಾಣಿಕೆ ಮತ್ತು ಸಹಾಯಧನ ಸಂಗ್ರಹ, ರಾತ್ರಿ 8ಕ್ಕೆ ಮಹಾಪೂಜೆ, 8.30ಕ್ಕೆ ಅತ್ತಾಳ ಪೂಜೆ, ಗಣಪತಿ ಪ್ರಾರ್ಥನೆ ನಡೆಯಲಿದೆ.

            ನ.19 ರಂದು ಬೆಳಿಗ್ಗೆ 6ಕ್ಕೆ ಉಷಃಪೂಜೆ, 6.30ಕ್ಕೆ ಗಣಪತಿ ಹೋಮ, 7 ರಿಂದ ಬಲಿವಾಡು ಸಂಗ್ರಹ, ದೇಣಿಗೆ ಸಂಗ್ರಹ, 8ಕ್ಕೆ ಪಾವೂರು ದೈವಸ್ಥಾನದಿಂದ ಶ್ರೀಧೂಮಾವತಿ ದೈವದ ಭಂಡಾರ ಆಗಮನ, 9.30ಕ್ಕೆ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ದೀಪಾರಾಧನೆ, ತಾಯಂಬಕ, ಭಜನೆ, ರಾತ್ರಿ 9ಕ್ಕೆ ಶ್ರೀಭೂತಬಲಿ ಉತ್ಸವ ಆರಂಭ, 8.30 ರಿಂದ ಅನ್ನಸಂತರ್ಪಣೆ, 10ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

          ನ.20 ರಂದು ಬೆಳಿಗ್ಗೆ 6ಕ್ಕೆ ಉಷಃಪೂಜೆ, 9 ರಿಂದ ಶ್ರೀಭೂತಬಲಿ ಉತ್ಸವ, 10 ರಿಂದ ದರ್ಶನಬಲಿ, ಬಟ್ಲು ಕಾಣಿಕೆ, ರಾಜಾಂಗಣ ಪ್ರಸಾದ, 11.30ಕ್ಕೆ ಮಂತ್ರಾಕ್ಷತೆ ವಿತರಣೆ, 12 ರಿಂದ ಶ್ರೀಧೂಮಾವತಿ ದೈವದ ತಂಬಿಲ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ಕ್ಕೆ ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಮಲ್ಲಮೂಲೆ ತರವಾಡು ಮನೆಯಿಂದ ಶ್ರೀವಿಷ್ಣುಮೂರ್ತಿ ದೈವದ ಭಂಡಾರ ಆಗಮನ, 8.30ಕ್ಕೆ ಕಾರ್ತಿಕ ಪೂಜೆ, ಪ್ರಸಾದ ವಿತರಣೆ, ದೈವಗಳ ತೊಡಂಙಲ್ ನಡೆಯಲಿದೆ. 

       ನ.21 ರಂದು ಬೆಳಿಗ್ಗೆ 7.30ಕ್ಕೆ ಶ್ರೀರಕ್ತೇಶ್ವರಿ ದೈವದ ಕೋಲ, 10 ರಿಂದ ನಾಗ ದೇವರ ತಂಬಿಲ, 12ಕ್ಕೆ ಶ್ರೀಮಹಾವಿಷ್ಣುಮೂರ್ತಿ ದೈವದ ಕೋಲ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries