HEALTH TIPS

ಸುಸ್ಥಿರ ಕೃಷಿ ಅಭಿವೃದ್ಧಿ- ಸಿ.ಪಿ.ಸಿ.ಆರ್. ಐ.ಯಲ್ಲಿ ಕೃಷಿ ವಿಚಾರ ಸಂಕಿರಣ

               ಕಾಸರಗೋಡು: ಸಿಪಿಸಿಆರ್‍ಐನಲ್ಲಿ ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣ ಇಲಾಖೆ ಹಾಗೂ ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಕೇಂದ್ರ ಕಾಸರಗೋಡು ಜಂಟಿಯಾಗಿ ಆಯೋಜಿಸಿದ್ದ ಕೃಷಿ ವಿಚಾರ ಸಂಕಿರಣವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಕೃಷಿ ಕ್ಷೇತ್ರ ಕಾಲದಿಂದ ಕಾಲಕ್ಕೆ ಬದಲಾಗಬೇಕಾಗಿದ್ದು, ತಂತ್ರಜ್ಞಾನದ ಅತ್ಯಾಧುನಿಕ ಕಲ್ಪನೆಗಳನ್ನು ಬಳಸಿಕೊಂಡು ವಿವಿಧ ರೀತಿಯ ಬೆಳೆಗಳನ್ನು ಉತ್ಪಾದಿಸುವ ಅಗತ್ಯವಿದೆ ಎಂದು ಸಂಸದರು ಹೇಳಿದರು. ಕೃಷಿ ಕ್ಷೇತ್ರದಲ್ಲಿ ಯೋಜನೆ ಮತ್ತು ಮರುಚಿಂತನೆಗಾಗಿ ರೈತರ ಆಕಾಂಕ್ಷೆಗಳು ಅಗತ್ಯವಾಗಿದ್ದು, ಯೋಜನೆಗೆ ಇದು ಅವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

                 ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಕೃಷಿ ಅಭಿವೃದ್ಧಿ ಉದ್ದೇಶದಿಂದ ಮುಂದಿನ ಐದು ವರ್ಷಗಳ ಅವಧಿಗೆ ಜಿಲ್ಲಾ ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣ ಇಲಾಖೆ ಸಿದ್ಧಪಡಿಸಿರುವ ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಬಿಡುಗಡೆ ಮಾಡಿದರು.

                  ಶಾಸಕರಾದ ಇ.ಎಸ್. ಚಂದ್ರಶೇಖರನ್, ಸಿ.ಎಚ್. ಕುಂಞಂಬು ಹಾಗೂ ಎ.ಕೆ.ಎಂ.ಅಶ್ರಫ್ ಅವರು ಅಗ್ರಿ ಹಾರ್ಟಿಕಲ್ಚರ್ ಸೊಸೈಟಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ಲಾಂಟ್ ಜಿನೋಮ್ ಕ್ಸೇವಿಯರ್ ಫಾರ್ಮರ್ ಪ್ರಶಸ್ತಿ ವಿಜೇತ ಸತ್ಯನಾರಾಯಣ ಬೆಳೇರಿ ಅವರನ್ನು ಸಿಪಿಸಿಆರ್ ಐ ನಿರ್ದೇಶಕಿ ಅನಿತಾ ಕರುಣ್ ಸನ್ಮಾನಿಸಿದರು. ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಯೋಜನೆಯ ಬಗ್ಗೆ ವಿವರಿಸಿದರು. ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಪಿ.ಎ.ಅಶ್ರಫಲಿ, ಮೊಗ್ರಾಲ್ ಪುತ್ತೂರು  ಪಂಚಾಯಿತಿ ಅಧ್ಯಕ್ಷೆ ನ್ಯಾಯವಾದಿ. ಸಮೀರಾ ಫೈಸಲ್, ಪಂ. ಯೋಜನಾ ನಿರ್ದೇಶಕ ಕೆ.ಎಸ್. ಪ್ರದೀಪನ್ ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಪಿ. ಜನಾರ್ದನನ್, ಬೆಂಗಳಂ ಪಿ. ಕೃಷ್ಣನ್, ಟಾಮಿ ಪ್ಲಚೇರಿ, ಸಿಎ ಅಬ್ದುಲ್ಲಕುಂಞÂ್ಞ,  ಕೈಪ್ರದ್  ಕೃಷ್ಣನ್ ನಂಬಿಯಾರ್, ದಾಮೋದರ ಬೆಳ್ಳಿಗೆ, ಮೈಕೆಲ್ ಎಂ. ಪೂವತ್ತೋಣಿ, ಸುರೇಶ ಪುತ್ತಿಯೇಡತ್, ಅಂಟಾಕ್ಸ್ ಜೋಸೆಫ್, ಸನ್ನಿ ಅರಮನೆ, ಅಜೀಜ್ ಕಡಪ್ಪುರಂ, ಮೋಹನನ್ ನಾಯರ್ ಕರಿಚೇರಿ, ಕೆ.ಟಿ.ಝಕಾರಿಯ ಮಾತನಾಡಿದರು.

                         ಸಿಪಿಸಿಆರ್‍ಐ ಪ್ರಧಾನ ವಿಜ್ಞಾನಿ ಡಾ.ಸಿ.ತಂಬಾನ್ ಅವರು ಸುಸ್ಥಿರ ಅಭಿವೃದ್ಧಿ ಸ್ಥಿತಿ ಮತ್ತು ಅಭಿವೃದ್ಧಿ ಕಾರ್ಯತಂತ್ರಗಳ ಕುರಿತು ವಿಷಯ ಮಂಡಿಸಿದರು. ಪಡಣ್ಣಕ್ಕಾಡ್ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಎಂ.ಶ್ರೀಕುಮಾರ್ ಅವರು ಸಸ್ಯ ಸಂರಕ್ಷಣೆ: ನಿನ್ನೆ-ಇಂದು-ನಾಳೆ ಕುರಿತು ತರಗತಿ ನೀಡಿದರು. ಪಂಚಾಯತಿ ಅಧ್ಯಕ್ಷರ ಸಂಘದ ಅಧ್ಯಕ್ಷ ಕೆ.ಪಿ.ವತ್ಸಲನ್ ಕೃಷಿ ಯೋಜನೆ ಮತ್ತು ಹಿರಿಮೆ ವಿಷಯ ಕುರಿತು ಮಾತನಾಡಿದರು. ಸಿಪಿಸಿಆರ್‍ಐ ಪ್ರಧಾನ ವಿಜ್ಞಾನಿ ಡಾ.ಸಿ. ತಂಬಾನ್ ಚರ್ಚೆಯನ್ನು ನಿರ್ವಹಿಸಿದರು. ಕಾಸರಗೋಡು ಸಹಾಯಕ ಕೃಷಿ ನಿರ್ದೇಶಕಿ ಅನಿತಾ ಕೆ. ಮೆನನ್ ಚರ್ಚೆಯನ್ನು ಕ್ರೋಡೀಕರಿಸಿದರು. ಕಾಸರಗೋಡು ಆತ್ಮ ಯೋಜನೆಯ ನಿರ್ದೇಶಕ ಟಿ. ಸುಶೀಲಾ ಸ್ವಾಗತಿಸಿ, ಉಪ ಕೃಷಿ ನಿರ್ದೇಶಕಿ ಮಿನಿ ಪಿ.ಜಾನ್ ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries