ಕಾಸರಗೋಡು: ಮಣ್ಣಿನೊಂದಿಗೆ ಹಾಗೂ ವನ್ಯಮೃಗಗಳೊಂದಿಗೆ ಸ್ನೇಹಪರವಾಗಿ ವ್ಯವಹರಿಸುವ ನಾಡಾದ ನಮ್ಮಲ್ಲಿ ವಲಸಿಗರನ್ನು ಸರ್ಕಾರ ಎಂದಿಗೂ ನಿರ್ಲಕ್ಷಿಸುವುದಿಲ್ಲ. ಆದರೆ, ಭೂಮಿ ದುರ್ಬಳಕೆ ಮಾಡಿಕೊಂಡಿರುವ ಅತಿಕ್ರಮಣದಾರರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಮತ್ತು ವಸತಿ ಸಚಿವ ಕೆ.ರಾಜನ್ ತಿಳಿಸಿದ್ದಾರೆ.
ಪರಪ್ಪ ಸ್ಮಾರ್ಟ್ ವಿಲೇಜ್ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಸಚಿವರು ಮಾತನಾಡಿದರು. ಸರ್ಕಾರ ಅನ್ಯಾಯವಾಗಿ ಒಡೆತನ ಹೊಂದಿರುವವರಿಂದ ಭೂಮಿಯನ್ನು ವಶಪಡಿಸಿಕೊಳ್ಳುವುದು ಮತ್ತು ಎಲ್ಲಾ ಭೂರಹಿತರಿಗೆ ಭೂಮಿಯನ್ನು ವಿತರಿಸುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ಹೇಳಿದರು.
ಶಾಸಕ ಇ.ಚಂದ್ರಶೇಖರ ಶಾಸಕ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎಂ. ಲಕ್ಷ್ಮಿ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಭೂಪೇಶ್, ಕೋಡಂಬೆಳ್ಳೂರು ಪಂಚಾಯಿತಿ ಉಪಾಧ್ಯಕ್ಷ ಪಿ.ದಾಮೋದರನ್, ಪರಪ್ಪ ಬ್ಲಾಕ್ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ವಿ.ಚಂದ್ರನ್, ಕಿನಾನೂರು ಕರಿಂದಳಂ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಚ್.ಅಬ್ದುಲ್ ನಾಸರ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಎ.ಆರ್.ರಾಜು, ಭಾಸ್ಕರನ್ ಆದಿತ್ಯೋಡಿ, ಕೆ.ಪಿ.ಬಾಲಕೃಷ್ಣನ್, ತಾಜುದ್ದೀನ್ ಕಮ್ಮ , ಪ್ರಮೋದ್ ವಣರ್ಂ ಮತ್ತು ವಿಜಯನ್ ಕೊಟ್ಟಕ್ಕಲ್ ಮಾತನಾಡಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಸ್ವಾಗತಿಸಿ, ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ವಂದಿಸಿದರು.




