ಮಂಜೇಶ್ವರ : ಕೇರಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಜೇಶ್ವರ ಸ್ಥಳೀಯ ಸಂಸ್ಥೆ ಮತ್ತು ಎಸ್. ವಿ. ವಿ. ಎ ಯು ಪಿ ಶಾಲೆ ಕೊಡ್ಲಮೊಗರು ಇದರ ಸಂಯುಕ್ತಾಶ್ರಯದಲ್ಲಿ ಬುಧವಾರ ಕೊಡ್ಲಮೊಗರು ಎಸ್. ವಿ. ವಿ.ಎ.ಯು.ಪಿ ಶಾಲಾ ಪರಿಸರದ ಹರ್ಷ ಗಾಯತ್ರಿ ಪಾತುರಾಯರ ಮಗ ಕಬ್ ವಿದ್ಯಾರ್ಥಿ ದ್ರುವ ಕಿಶನ್ ಪಾತುರಾಯರ ಮನೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ. ಅವರು ಮಗುವಿನ ಮನೆಯಲ್ಲೊಂದು ಕೈತೋಟ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವರ್ಕಾಡಿ ಪಂಚಾಯತಿ ಸದಸ್ಯೆ ಆಶಾ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಭಾರ್ಗವಿ ಟೀಚರ್, ಜಿಲ್ಲಾ ಆಯುಕ್ತೆ ಶ್ರೀಕುಮಾರಿ ಟೀಚರ್, ಶಾಲಾ ಮುಖ್ಯೋಪಾಧ್ಯಾಯಿನಿ ಸರಳ, , ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ರಝಾಕ್, ಮಂಜೇಶ್ವರ ಗ್ರಾ.ಪಂ. ಕೋಶಾಧಿಕಾರಿ ಆದಿನಾರಾಯಣ ಭಟ್, ಎಡಿಸಿ ಹಾಗೂ ಸೈಂಟ್ ಜೋಸೆಫ್ ಎ ಯು ಪಿ ಶಾಲೆ ಕಳಿಯೂರಿನ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಮತ್ತು ಎಡಿಒಸಿ ಸುಕನ್ಯಾ ಕೆ. ಟಿ. ಮತ್ತು ಕಾಸರಗೋಡು ರೋವರ್ ಜಿಲ್ಲಾಧಿಕಾರಿ ಅಜಿತ್ ಶುಭಾಸಂಶನೆಗೈದರು.
ಕೇರಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಜೇಶ್ವರ ವಿಭಾಗ ಕಾರ್ಯದರ್ಶಿ ಶಿವಪ್ರಸಾದ್ ಚೆರುಗೋಳಿ ಕಾರ್ಯಕ್ರಮ ನಿರೂಪಿಸಿದರು. ಬುಲ್ -ಬುಲ್ ವಿಭಾಗದ ಡಿಸಿ ಜ್ಯೋತಿಲಕ್ಷ್ಮಿ ಸ್ವಾಗತಿಸಿ, ಜಿ ಎಲ್ ಪಿ ಶಾ ಲೆ ಕುಳೂರಿನ ಅಧ್ಯಾಪಿಕೆ ನಯನ ಎಂ. ವಂದಿಸಿದರು.
ಕಾರ್ಯಕ್ರಮ ದಲ್ಲಿ ಬಿ ಪಿ ಪಿ ಎ ಲ್ ಪಿ ಪೆರ್ಮುದೆ ಶಾಲೆಯ ಅಧ್ಯಾಪಕ ಜಯಪ್ರಸಾದ್ ಮತ್ತು ಕೊಡ್ಲಮೊಗರು ಎಸ್. ವಿ. ವಿ. ಎ ಯು ಪಿ ಶಾಲೆಯ ಗೈಡ್ ಕ್ಯಾಪ್ಟನ್ ವಿಜಯಲಕ್ಷ್ಮಿ, ಅಧ್ಯಾಪಕರಾದ ಮಧು, ಸುಬ್ರಮಣ್ಯ ಭಟ್, ಸುಜಾತ ಮತ್ತು ಮಂಜುಳ ಸಹಕರಿಸಿದರು.




