ಮಂಜೇಶ್ವರ : ಕಡಂಬಾರು ಸರ್ಕಾರಿ ಪ್ರೌಢಶಾಲೆಯಲ್ಲಿ ಎರಡು ಕಂಪ್ಯೂಟರ್ ಲ್ಯಾಬ್ ಗಳ ನವೀಕರಣ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಶಾಲಾ ಅಧ್ಯಾಪಕರು ಸಿಬ್ಬಂದಿ ವರ್ಗದವರು ಮತ್ತು ನಿವೃತ್ತ ಅಧ್ಯಾಪಕರ ಸಹಾಯ ಸಹಕಾರದಿಂದ ಎರಡು ಲ್ಯಾಬ್ ಗಳ ನವೀಕರಣ ನಡೆಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಟೀಚರ್ ವಹಿಸಿದ್ದರು.
ಪ್ರೌಢಶಾಲೆಯ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯನ್ನು ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ .ಎನ್ ನಿರ್ವಹಿಸಿದರು. ಹಿರಿಯ ಪ್ರಾಥಮಿಕ ವಿಭಾಗದ ಕಂಪ್ಯೂಟರ್ ಲ್ಯಾಬಿನ ಉದ್ಘಾಟನೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ನೆರವೇರಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಶಿಕ್ಷಕ ಪುರಸ್ಕಾರ ವಿಜೇತ ನಾರಾಯಣ ದೇಲಂಪಾಡಿ ಭಾಗವಹಿಸಿ ಮಾತನಾಡಿದರು. ಪಿಟಿಎ ಅಧ್ಯಕ್ಷ ಅಬ್ದುಲ್ ಲತೀಫ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮುತ್ತಲಿಬ್, ಮಾತೃಸಂಘದ ಅಧ್ಯಕ್ಷೆ ರುಕ್ಸಾನ ಅಶ್ರಫ್, ನಿವೃತ್ತ ಅಧ್ಯಾಪಕ ವಿಜಯಕುಮಾರ್. ಎ., ಹಿರಿಯ ಅಧ್ಯಾಪಕಿ ಕನಕಂ ಕೆ .ಎಂ, ಮೂಸಕುಂಞ .ಡಿ. ಶುಭಾಶಂಸನೆಗೈದರು. ಅಧ್ಯಾಪಕ ಧರ್ಮಾನಂದ್ ಕುರುಪ್ ಸ್ವಾಗತಿಸಿ, ನಯನ ಪ್ರಸಾದ್ ಎಚ್. ಟಿ ವಂದಿಸಿದರು. ಇಸ್ಮಾಯಿಲ್ ಮಾಸ್ತರ್ ನಿರೂಪಿಸಿದರು. ಈ ಸಂದರ್ಭ ನಾರಾಯಣ ದೇಲಂಪಾಡಿ ಅವರನ್ನು ಅ|ಭಿನಂದಿಸಿ ಸನ್ಮಾನಿಸಲಾಯಿತು.




