ಬದಿಯಡ್ಕ: ಮವ್ವಾರಿನ ಶ್ರೀ ಷಡಾನನ ಯುವಕ ಸಂಘ ಮತ್ತು ಗ್ರಂಥಲಾಯದ ಆಶ್ರಯಲ್ಲಿ ವರದಕ್ಷಿಣೆ ಮತ್ತು ಲಿಂಗತಾರತಮ್ಯ ಸಂವಾದ ಕಾರ್ಯಕ್ರಮ ಮವ್ವಾರಿನ ಪದ್ಮಾವತಿ ನಿಲಯದಲ್ಲಿ ನಡೆಯಿತು.
ಸಂವಾದ ಕಾರ್ಯಕ್ರಮವನ್ನು ಕಾಸರಗೋಡು ಸರಕಾರ ಕಾಲೇಜಿನ ಸಹಾಯಕ ಪ್ರಾ`Á್ಯಪಕ ಡಾ. ರತ್ನಾಕರ ಮಲ್ಲಮೂಲೆ ನಡೆಸಿಕೊಟ್ಟರು.
ಗ್ರಂಥಾಲಯದ ಅಧ್ಯಕ್ಷ ಗಣೇಶ ಶರ್ಮಾ ಅಧ್ಯಕ್ಷತೆ ವಹಿಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಇ.ಜನಾರ್ದನನ್ ಉದ್ಘಾಟಿಸಿದರು. ಕುಂಬ್ಡಾಜೆ ಲೈಬ್ರರಿ ನಾಯಕತ್ವ ಸಮಿತಿ ಸದಸ್ಯ ಅಶ್ರಫ್, ನವಜೀವನ ಹೈಸ್ಕೂಲ್ ಅಧ್ಯಾಪಿಕೆ ಪ್ರಭಾವತಿ ಕೆದಿಲಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಂವಾದಕ್ಕೆ ಚಾಲನೆಯನ್ನು ನೀಡಿದ ಡಾ. ರತ್ನಾಕರ ಮಲ್ಲಮೂಲೆ ಮಾತನಾಡಿ, ಗಂಡು-ಹೆಣ್ಣು ಅಥವಾ ಸ್ತ್ರೀ -ಪುರುಷ ಎಂಬ ವರ್ಗೀಕರಣ ಪ್ರಕೃತಿಯಲ್ಲೇ ಇದೆ. ಮಾನವರಾಶಿಯಲ್ಲಿ ಮಾತ್ರವಲ್ಲ, ಪಶು ಪಕ್ಷಿಗಳಲ್ಲೂ, ಮರಗಿಡಗಳು, ತರುಲೆತೆಗಳು, ಎಲ್ಲದರಲ್ಲೂ ಇದನ್ನು ಕಾಣಬಹುದು. ಜಗತ್ತು ನಿಯಂತ್ರಿಸಲ್ಪಡುವುದೇ ಸ್ತ್ರೀ-ಪುರುಷ ಸಮಾನತೆಯಿಂದ ಎಂದರು. ಮಹಿಳಾ ಶಬಲೀಕರಣಕ್ಕೆ ಬೇಕಾಗಿ ಹೋರಾಡಿದ ಆನೇಕ ಮಹಾಪುರುಷರು ಇದ್ದಾರೆ. ಇದೇ ರೀತಿಯಲ್ಲಿ ಮಹಾನೀಯರು ಸತೀ ಸಹಗಮನವನ್ನು ವಿರೋಸಿದವರು. ವಿಧÀವಾ ವಿವಾಹವನ್ನು ಪೆÇ್ರೀತ್ಸಾಹಿಸಿದರು ಹಾಗೂ ಸ್ತ್ರೀಯರ ಹಕ್ಕುಗಳಿಗಾಗಿ ಹೋರಾಡಿ ಪ್ರಾತ: ಸ್ಮರಣೀಯರಾದರು ಎಂದರು. ವರದಕ್ಷಿಣೆ ಎಂಬ ಪಿಡುಗನ್ನು ಕಾನೂನುಗಳಿಂದ ಮಾತ್ರ ಹೋಗಾಲಡಿಸಲು ಸಾಧ್ಯವಿಲ್ಲ. ಮನುಷ್ಯನ ಮನೋಭಾವ ಬದಲಾದಾಗ ಮಾತ್ರ ಇದು ಸಾಧ್ಯ. ಲಿಂಗ ಅಸಮಾನತೆಯನ್ನು ನಿವಾರಿಸಲು ಇರುವ ಅನೇಕ ಕಾನೂನುಗಳ ಬಗ್ಗೆ ಕೂಡ ಮಾಹಿತಿ ನೀಡಿದರು.
ಈ ಸಂದಭರ್Àದಲ್ಲಿ ಗಂಗಾಧರ ರೈ, ಪದ್ಮನಾಭ ಮಣಿಯಾಣಿ, ಜಯಲಕ್ಷ್ಮೀ ಟೀಚರ್, ಸೌಮ್ಯಲತಾ ಕಾರ್ಲೆ, ಗಣಪತಿ ಭಟ್, ಕೃಷ್ಣಮೂರ್ತಿ ಎಡಪ್ಪಾಡಿ ಮತ್ತಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸೌಮ್ಯಲತಾ ಕಾರ್ಲೆ ತಾವುರಚಿಸಿದ ಕವಿತೆಯನ್ನು ವಾಚಿಸಿದರು.
ಆರಂಭದಲ್ಲಿ ಗೋಪಿಕಾ ಪ್ರಾರ್ಥನೆ ಹಾಡಿದರು. ಗ್ರಂಥಾಲಯದ ಕಾರ್ಯದರ್ಶಿ ಶ್ಯಾಮಲಾ ಕುಮಾರಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಚಾತುಕುಟ್ಟಿ ಮಾಸ್ತರ್ ವಂದಿಸಿದರು.

