HEALTH TIPS

ಶಬರಿಮಲೆಯ ತೀರ್ಥ ಸ್ಯಾನಿಟೈಸರ್ ರೀತಿಯಲ್ಲಿ ಬಳಕೆ; ಕೇರಳ ಸಚಿವರ ವಿರುದ್ಧ ಆಕ್ರೋಶ

               ತಿರುವನಂತಪುರ: ಪ್ರಸಿದ್ಧ ಶಬರಿಮಲೆ ದೇವಸ್ಥಾನದ ತೀರ್ಥ ಪ್ರಸಾದವನ್ನು ಹ್ಯಾಂಡ್ ಸ್ಯಾನಿಟೈಸರ್ ರೀತಿಯಲ್ಲಿ ಬಳಕೆ ಮಾಡಿರುವ ಸಂಬಂಧ ಕೇರಳದ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.

               ಶಬರಿಮಲೆಯಲ್ಲಿ ಎರಡು ತಿಂಗಳ ಕಾಲ ನಡೆಯಲಿರುವ ಮಂಡಳಂ-ಮಕರವಿಳಕ್ಕು ವಾರ್ಷಿಕ ಧಾರ್ಮಿಕ ಯಾತ್ರೆಗೆ ಚಾಲನೆ ದೊರಕಿದೆ.

                ತೀರ್ಥಯಾತ್ರೆಯ ಕಾಲಘಟ್ಟದಲ್ಲಿ ದೇವಸ್ಥಾನದ ಬಾಗಿಲು ತೆರೆಯಲು ಹಾಗೂ ಭಕ್ತರನ್ನು ಸ್ವಾಗತಿಸಲು ಸೋಮವಾರ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಅನಂತಗೋಪನ್ ಮತ್ತು ಸ್ಥಳೀಯ ಶಾಸಕ ಪ್ರವೋದ್ ನಾರಾಯಣನ್ ಅವರೊಂದಿಗೆ ಸಚಿವರು ದೇವಸ್ಥಾನಕ್ಕೆ ಆಗಮಿಸಿದ್ದರು.

           ಪುರೋಹಿತರು ನೀಡಿದ ತೀರ್ಥ ಪ್ರಸಾದವನ್ನು ಸ್ವೀಕರಿಸಿದ ಸಚಿವರು ಹ್ಯಾಂಡ್ ಸ್ಯಾನಿಟೈಸರ್ ರೀತಿಯಲ್ಲಿ ಬಳಕೆ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಸಂಬಂಧ ಕೇರಳ ಸಚಿವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ವ್ಯಕ್ತವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries