HEALTH TIPS

ಗೂಗಲ್ ಲಾಗಿನ್ ಹೊಸ ನಿಯಮ ಇಂದಿನಿಂದ ಚಾಲ್ತಿಗೆ; ಒಟಿಪಿ ನಮೂದು ಮಾಡುವುದು ಕಡ್ಡಾಯ

               ನವದೆಹಲಿ: ಗೂಗಲ್ ಬಳಕೆದಾರರು ತಮ್ಮ ಖಾತೆಗೆ ಲಾಗಿನ್ ಆಗಬೇಕಾದರೆ ಇನ್ನು ಎರಡು ಸ್ತರದ ಪರಿಶೀಲನೆ ಪ್ರಕ್ರಿಯೆಗೆ ಒಳಗಾಗಬೇಕು. ಇದುವರೆಗೆ ಐಚ್ಛಿಕವಾಗಿದ್ದ ಈ ಪ್ರಕ್ರಿಯೆ  ಎಲ್ಲರಿಗೂ ಅನ್ವಯವಾಗುವಂತೆ ಇಂದಿನಿಂದ ಚಾಲ್ತಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

                 ಈ ವರ್ಷ ಮೇ ತಿಂಗಳಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದ್ದ ಗೂಗಲ್, ಡಿಸೆಂಬರ್ ವೇಳೆಗೆ ಗೂಗಲ್ ಖಾತೆ ಲಾಗಿನ್ ಪ್ರಕ್ರಿಯೆ ಬದಲಾಗಲಿದೆ. ಎಲ್ಲ ಬಳಕೆದಾರರು ಎರಡು ಸ್ತರದ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿತ್ತು.

                   ಈ ಬದಲಾವಣೆಯು ಎಲ್ಲರ ಖಾತೆಗೂ ಹೆಚ್ಚುವರಿ ರಕ್ಷಣೆಯ ಪದರವನ್ನು ಒದಗಿಸುತ್ತದೆ. ಈ ವರ್ಷ ಕೊನೆಗೆ ಹೆಚ್ಚುವರಿಯಾಗಿ 15 ಕೋಟಿ ಬಳಕೆದಾರರು ಆಟೋ-ಎನ್​ರೋಲ್ ಆಗುವುದಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದೇ ರೀತಿ 20 ಲಕ್ಷ ಯೂಟ್ಯೂಬ್ ಕ್ರಿಯೇಟರ್​ಗಳಿಗೂ ಇದೇ ರೀತಿ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಆಯ್ಕೆಯನ್ನು ಚಾಲನೆಗೊಳಿಸಿದರೆ, ಗೂಗಲ್ ಖಾತೆಗೆ ಲಾಗಿನ್ ಆಗಲು ಪಾಸ್​ವರ್ಡ್ ಹಾಕಿದ ಕೂಡಲೇ ಬಳಕೆದಾರರ ಮೊಬೈಲ್​ಗೆ ಒಂದು ಎಸ್​ಎಂಎಸ್ ರವಾನೆಯಾಗುತ್ತದೆ. ಅದರಲ್ಲಿ ಇರುವ ಒಟಿಪಿಯನ್ನು ಗೂಗಲ್ ಖಾತೆ ಲಾಗಿನ್​ಗೆ ಬಳಸಬೇಕು. ಇದು ಪ್ರತಿ ಸಲ ಲಾಗಿನ್ ಆಗುವಾಗಲೂ ಅನ್ವಯವಾಗುತ್ತಿದ್ದು, ಪ್ರತಿ ಸಲವೂ ಒಟಿಪಿ ನಮೂದಿಸಬೇಕು ಎಂದು ಗೂಗಲ್ ಅಧಿಕೃತ ಬ್ಲಾಗ್ ಪೋಸ್ಟ್​ನಲ್ಲಿ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries