ತಿರುವನಂತಪುರ: ರಾಜ್ಯದಲ್ಲಿ ನೊರೊವೈರಸ್ ದೃಢಪಟ್ಟಿರುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ವಯನಾಡು ಜಿಲ್ಲೆಯಲ್ಲಿ ನೊರೊ ವೈರಸ್ ದೃಢಪಟ್ಟಿರುವ ಕುರಿತು ಪರಿಸ್ಥಿತಿಯನ್ನು ಅವಲೋಕನ ನಡೆಸಲು ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ವಯನಾಡು ಜಿಲ್ಲೆಯಲ್ಲಿ ಜಾಗರೂಕತೆಯ ಸೂಚನೆಗಳನ್ನು ನೀಡಲಾಗಿದೆ.

