ಕಾಸರಗೋಡು: ಕಾನೂನು ಎಂದರೆ ಸಾಮಾನ್ಯ ಜ್ಞಾನ ಮತ್ತು ಕಾನೂನು ಪುಸ್ತಕಗಳು ಸಾಮಾನ್ಯ ಜ್ಞಾನದ ಲಿಖಿತ ರೂಪವಾಗಿದ್ದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಪಿ.ವಿ.ಕುಂಞÂ್ಞ ಕೃಷ್ಣನ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳ ಸಮಾರೋಪವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಕಾನೂನು ಪುಸ್ತಕಗಳು ಈಗ ಸ್ಥಳೀಯ ಭಾಷೆಗಳಲ್ಲೂ ಲಭ್ಯವಿದೆ. ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ತೀರ್ಪುಗಳನ್ನು ನೀಡಲಾಗುತ್ತದೆ. ಪ್ರತಿ ಅಪರಾಧದ ಬಗ್ಗೆ ಸಾಮಾನ್ಯ ಜನರು ಒಮ್ಮೆ ಯೋಚಿಸಿದರೆ ಮಾತ್ರ ಕಾನೂನು ಅರಿವು ಬರಲು ಸಾಧ್ಯ. ಕಾನೂನು ನೆರವು ಸಾಂವಿಧಾನಿಕ ಹಕ್ಕು. ಅದನ್ನು ತಿಳಿದು ಪಸರಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಹೊಸದುರ್ಗ ತಾಲೂಕು ಕಾನೂನು ಸೇವಾ ಸಮಿತಿಯು ಡಿಎಲ್‍ಎಸ್‍ಎ ಒದಗಿಸುವ ಸೇವೆಗಳ ಕುರಿತು ಸಿದ್ಧಪಡಿಸಿದ ಕಿರುಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಒಂದೂವರೆ ತಿಂಗಳ ಕಾಲ ನಡೆದ ಕಾನೂನು ಅರಿವು ಅಭಿಯಾನದ ಅಂಗವಾಗಿ ವಕೀಲರು, ಪ್ಯಾರಾಲೀಗಲ್ ಸ್ವಯಂಸೇವಕರು ಮತ್ತು ಎನ್‍ಜಿಒ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸತ್ರ ನ್ಯಾಯಾಧೀಶ ಪಿ.ವಿ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ.ನೆಲ್ಲಿಕುನ್ನು, ಸಬ್ ಕಲೆಕ್ಟರ್ ಮೇಖಾಶ್ರೀ ಡಿ.ಆರ್., ಎಎಸ್ಪಿ ಹರಿಶ್ಚಂದ್ರ ನಾಯಕ್, ಹೊಸದುರ್ಗ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ (ವಿಶೇಷ ನ್ಯಾಯಾಧೀಶ) ಸಿ.ಸುರೇಶ್ ಕುಮಾರ್, ಕಾಸರಗೋಡು ವಕೀಲರ ಸಂಘದ ಅಧ್ಯಕ್ಷ ಎಂ.ನಾರಾಯಣ ಭಟ್, ಜಿಲ್ಲಾ ಸರ್ಕಾರಿ ಅಭಿಯೋಜಕ ದಿನೇಶ್ ಕುಮಾರ್.ಕೆ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ (ಉಪ ನ್ಯಾಯಾಧೀಶ) ಶುಹೈಬ್.ಎಂ ಸ್ವಾಗತಿಸಿ, ವಿಭಾಗಾಧಿಕಾರಿ ದಿನೇಶ್.ಕೆ ವಂದಿಸಿದರು.




