ಕಣ್ಣೂರು: ಕೆ.ಕರುಣಾಕರನ್ ಹೆಸರಿನಲ್ಲಿ ವಂಚನೆಯ ಟ್ರಸ್ಟ್ ಸ್ಥಾಪಿಸಿ ಕೆ.ಸುಧಾಕರನ್ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷರಾಗಲು ಸುಧಾಕರನ್ ಯೋಗ್ಯರಲ್ಲ ಎಂದು ಮಂಬರಂ ದಿವಾಕರನ್ ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ದಿವಾಕರನ್ ಅವರನ್ನು ಕಾಂಗ್ರೆಸ್‍ನಿಂದ ಉಚ್ಚಾಟಿಸಲಾಗಿತ್ತು. ಸುಧಾಕರನ್ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಡೆಯುವ ಕೆಲಸ ಮಾಡಿದ್ದನ್ನು ಬಹಿರಂಗಪಡಿಸಿದ ಅವರು, ಕಣ್ಣೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ನಂತರ ಸುಧಾಕರನ್ ಅವರು ಮೊದಲ ಗುರಿ ಇರಿಸಿಕೊಂಡದ್ದು ತನ್ನನ್ನು. ಬಾಯಿ ತೆರೆದರೆ ಹಲವು ವಿಷಯಗಳಿಗೆ ತಡೆಯೊಡ್ಡಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಇಂದಿರಾಗಾಂಧಿ ಆಸ್ಪತ್ರೆಯನ್ನು ಇಂದಿನ ಸ್ಥಿತಿಯಲ್ಲಿ ಅಭಿವೃದ್ಧಿ ಪಡಿಸಲು ತನ್ನ ಪರಿಶ್ರಮವೇ ಕಾರಣವಾಗಿದ್ದು, 1969ರಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಕಣ್ಣೂರು ಡಿಸಿಸಿ ಕಚೇರಿಗೆ ಲಕ್ಷಗಟ್ಟಲೆ ಹಣ ನೀಡಿದ್ದೇನೆ. ಆದರೆ ಆ ಬಳಿಕ ಕಚೇರಿ ಉದ್ಘಾಟನೆಗೂ ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕಣ್ಣೂರು ಡಿಸಿಸಿ ಅಧ್ಯಕ್ಷ ಮಾರ್ಟಿನ್ ಜಾರ್ಜ್ ಅವರು ಪ್ರತಿಕ್ರಿಯೆ ನೀಡಿ, ದಿವಾಕರನ್ ಪಕ್ಷಕ್ಕೆ ನೀಡಿದ್ದ ಎಲ್ಲಾ ಭರವಸೆಗಳನ್ನು ಉಲ್ಲಂಘಿಸಿದ್ದಾರೆ, ದಿವಾಕರನ್ ಹಣದ ಮೂಲಕ ಪಕ್ಷಕ್ಕೆ ಸವಾಲು ಹಾಕುತ್ತಿದ್ದಾರೆ ಮತ್ತು ಆ ಕಾರಣದಿಂದ ಉಚ್ಛಾಟನೆಗೆ ಮುಂದಾಗಬೇಕು ಎಂದು ಹೇಳಿದರು.




