HEALTH TIPS

ರಾತ್ರಿ ಸರಿಯಾಗಿ ನಿದ್ದೆ ಬಾರದೇ ಹೆಣಗಾಡುತ್ತಿದ್ದೀರಾ? ಇಲ್ಲಿದೆ ಪರಿಹಾರ

                ನಿಮ್ಮ ದೇಹವನ್ನು ಹಾಗೂ ಮೆದುಳನ್ನು ಆರೋಗ್ಯವಾಗಿಡಲು ಉತ್ತಮ ನಿದ್ರೆ ಬಹಳ ಮುಖ್ಯ. ಇದು ಮರುದಿನ ಎದ್ದಾಗ ನಮಗೆ ಚೈತನ್ಯ ಮತ್ತು ತಾಜಾತನವನ್ನು ಅನುಭವಿಸಲು ಸಹಾಯ ಮಾಡುತ್ತದೆ, ಈ ಮೂಲಕ ನಮ್ಮ ದಿನದ ಎಲ್ಲಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

              ಆದಾಗ್ಯೂ, ಪ್ರತಿಯೊಬ್ಬರಿಗೂ ಉತ್ತಮ ನಿದ್ರೆ ಪಡೆಯಲು ಸಾಧ್ಯವಾಗುವುದಿಲ್ಲ, ಅನೇಕ ಜನರು ನಿದ್ರೆಯ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಇದು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ ನಾವಿಂದು ಪರಿಹಾರ ನೀಡಲಿದ್ದೇವೆ. ಉತ್ತಮ ನಿದ್ರೆಗಾಗಿ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಅಂತಹ ಒಂದು ಮನೆಮದ್ದು ಅಂದ್ರೆ ಗೋಡಂಬಿ ಹಾಲು. ಈ ಮನೆಮದ್ದನ್ನು ತಯಾರಿಸುವುದು ಹೇಗೆ? ಇದು ನಿದ್ರೆಗೆ ಹೇಗೆ ಸಹಕಾರಿ ಎಂಬುದನ್ನು ತಿಳಿಯಲು ಕೆಳಗೆ ಸ್ಕ್ರೋಲ್ ಮಾಡಿ.
            ಉತ್ತಮ ನಿದ್ರೆಗಾಗಿ ಗೋಡಂಬಿ ಹಾಲು ಹೇಗೆ ಸಹಾಯ ಮಾಡಲಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
                ಉತ್ತಮ ನಿದ್ರೆಗಾಗಿ ಗೋಡಂಬಿ ಹಾಲು: ತಜ್ಞರು, ಉತ್ತಮ ನಿದ್ರೆ ಪಡೆಯಲು ಹಾಲು ಮತ್ತು ಗೋಡಂಬಿ ಕಾಂಬೊವನ್ನು ಸಲಹೆ ನೀಡುತ್ತಾರೆ. ಇದು ತುಂಬಾ ಪರಿಣಾಮಕಾರಿಯಾಗಿದ್ದು, ಶೀಘ್ರದಲ್ಲೇ ಫಲಿತಾಂಶಗಳನ್ನು ನೋಡುತ್ತೀರಿ. ಬೇಕಾಗುವ ಪದಾರ್ಥಗಳು: 3-4 ಗೋಡಂಬಿ ಹಾಲು ರುಚಿಗೆ ಸಕ್ಕರೆ ತಯಾರಿಸುವ ವಿಧಾನ: 3-4 ಗೋಡಂಬಿ ತೆಗೆದುಕೊಂಡು ಅವುಗಳನ್ನು ಒಂದು ಕಪ್ ಹಾಲಿನಲ್ಲಿ ಹಾಕಿ, 4-5 ಗಂಟೆಗಳ ಕಾಲ ನೆನೆಯಲು ಬಿಡಿ. ಈಗ, ನೆನೆಸಿದ ಗೋಡಂಬಿ ತೆಗೆದುಕೊಂಡು ಅವುಗಳನ್ನು ರುಬ್ಬಿಕೊಂಡು, ಹಾಲಿನ ಪಾತ್ರೆಗೆ ಸುರಿಯಿರಿ. ಅಲ್ಲದೆ, ಈ ಬಟ್ಟಲಿನಲ್ಲಿ ಗೋಡಂಬಿ ನೆನೆಸಿದ ಹಾಲನ್ನು ಸುರಿಯಿರಿ. ರುಚಿಗೆ ಸ್ವಲ್ಪ ಸಕ್ಕರೆ ಕೂಡ ಸೇರಿಸಬಹುದು. ಈಗ ಇದನ್ನು ಸ್ವಲ್ಪ ಹೊತ್ತು ಕುದಿಸಿದರೆ, ನಿಮ್ಮ ಪಾನೀಯ ಸಿದ್ಧವಾಗುವುದು.
              ಗೋಡಂಬಿ ಹಾಲು ಸೇವಿಸಬೇಕಾದ ಸಮಯ: ನೀವು ಈ ಪಾನೀಯವನ್ನು ಮಾಡಿದ ನಂತರ, ಮಲಗುವ ಮುನ್ನು ಕುಡಿಯಬೇಕು. ಇದು ನಿಮಗೆ ಗರಿಷ್ಠ ಪ್ರಯೋಜನಗಳನ್ನು ಒದಗಿಸುತ್ತದೆ. ಖಂಡಿತವಾಗಿಯೂ ಒಳ್ಳೆಯ ನಿದ್ರೆ ಪಡೆಯುತ್ತೀರಿ ಮತ್ತು ಮರುದಿನ ರಾಕ್ ಮಾಡಲು ರಿಫ್ರೆಶ್ ಆಗುತ್ತೀರಿ.
               ನಿದ್ರೆಗಾಗಿ ಗೋಡಂಬಿ: ಗೋಡಂಬಿ ಸೇರಿದಂತೆ ಹಲವಾರು ಬೀಜಗಳು ನಿದ್ರೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಮೆಲಟೋನಿನ್ ಜೊತೆಗೆ ಮೆಗ್ನೀಸಿಯಮ್ ಮತ್ತು ಸತುವಿನಂತಹ ಅಗತ್ಯವಾದ ಖನಿಜಗಳನ್ನು ಒಳಗೊಂಡಿರುತ್ತದೆ, ಇದು ಹಲವಾರು ದೈಹಿಕ ಕಾರ್ಯಗಳಿಗೆ ಮುಖ್ಯವಾಗಿದೆ. ಜೊತೆಗೆ ಸಂಶೋಧನೆಯಲ್ಲಿ, ಮೆಲಟೋನಿನ್, ಮೆಗ್ನೀಸಿಯಮ್ ಮತ್ತು ಸತುವಿನ ಸಂಯೋಜನೆಯು ವಯಸ್ಕರಿಗೆ ನಿದ್ದೆಗೆ ಸಹಾಯ ಮಾಡುತ್ತದೆ ಎಂದು ಕಂಡುಬಂದಿದೆ. ಆದ್ದರಿಂದ, ಉತ್ತಮವಾಗಿ ನಿದ್ದೆ ಮಾಡಲು ಕಷ್ಟಪಡುತ್ತಿದ್ದರೆ, ಗೋಡಂಬಿಯನ್ನು ಆಯ್ಕೆ ಮಾಡಬಹುದು.
            ನಿದ್ರೆಗೆ ಹಾಲು: ಬಹಳ ಹಿಂದಿನ ಕಾಲದಿಂದಲೂ ಮಲಗುವ ಸಮಯದಲ್ಲಿ ಹಾಲು ಕುಡಿಯುತ್ತಿದ್ದರು. ಏಕೆಂದರೆ ಹಾಲು ಸರಿಯಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ . ವಯಸ್ಸಾದವರಲ್ಲಿ ನಿದ್ರೆ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುವ ಟ್ರಿಪ್ಟೊಫಾನ್ ಇದಕ್ಕೆ ಕಾರಣ. ಇದರ ಜೊತೆಯಲ್ಲಿ, ಹಾಲಿನಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಇದ್ದು, ಅದು ಮಗುವಿನಂತೆ ಮಲಗಲು ಸಹಾಯ ಮಾಡುತ್ತದೆ. ಆದ್ದರಿಂದ, ಮಲಗುವ ವೇಳೆಗೆ ಹಾಲು ಕುಡಿಯುವುದನ್ನು ಶಿಫಾರಸು ಮಾಡಲಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries