HEALTH TIPS

ತೆಳಿಮ ಯೋಜನೆ ಮೂಲಕ ಪಡಿತರ ಚೀಟಿಯ ಲೋಪದೋಷ ತಿದ್ದುಪಡಿಗೆ ಅವಕಾಶ

                ಕಾಸರಗೋಡು: ಪಡಿತರ ಚೀಟಿಯಲ್ಲಿ ತಲೆದೋರಿದ ಲೋಪದೋಷಗಳನ್ನು ತಿದ್ದುಪಡಿ ನಡೆಸುವ ನಿಟ್ಟಿನಲ್ಲಿ ಮತ್ತು ನೂತನ ಮಾಹಿತಿ ಅಪ್ ನಡೆಸುವ ನಿಟ್ಟಿನಲ್ಲಿ ಸಿದ್ಧಗೊಂಡಿರುವ "ತೆಳಿಮ" ಯೋಜನೆಗೆ ಚಾಲನೆ ಲಭಿಸಿದೆ.  

               2017 ರ ಪಡಿತರ ಚೀಟಿ ನವೀಕರಣ ಸಂಬಂಧ ರೇಷನ್ ಕಾರ್ಡ್ ಮೆನಜ್ ಮೆಂಟ್ ಸಿಸ್ಟಂ ನಲ್ಲಿ ಬಂದಿರುವ ಲೋಪದೋಷಗಳನ್ನು ತಿದ್ದಪಡಿ ನಡೆಸುವ ನಿಟ್ಟಿನಲ್ಲಿ "ತೆಳಿಮ" ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ನಾಗರೀಕ ಪೂರೈಕೆ ಸಚಿವ ಜಿ.ಆರ್.ಅನಿಲ್ ತಿಳಿಸಿದರು. 

            ಸದಸ್ಯರ ಹೆಸರು, ವಯಸ್ಸು, ವಿಳಾಸ, ಕಾರ್ಡ್ ಮಾಲೀಖರ ಜತೆಗಿನ ಸಂಬಂಧ ಲೋಪದೋಷ, ಎಲ್.ಪಿ.ಜಿ., ವಿದ್ಯುತ್ ಸಂಪರ್ಕ ಇತ್ಯಾದಿಗಳಲ್ಲಿನ ಬದಲಾವಣೆ, ನೂತನ ಮಾಹಿತಿಗಳ ಸೇರ್ಪಡೆ ಇತ್ಯಾದಿಗಳು ಯೋಜನೆ ಅಂಗವಾಗಿ ಮಂಜೂರಾಗಲಿದೆ. ಡಿ.15ವರೆಗೆ ಈ ಶಿಬಿರ ನಡೆಯಲಿದೆ. 

           ಸ್ಮಾರ್ಟ್ ಕಾರ್ಡ್ ಗೆ ಪರಿವರ್ತಿಸುವ ವೇಳೆ ಕಾರ್ಡಿನ ಮಾಹಿತಿ ಪೂರ್ಣರೂಪದಲ್ಲಿ ಸೂಕ್ತವಾಗಿದೆ ಎಂದು ಖಚಿತಪಡಿಸಲೂ "ತೆಳಿಮ" ಯೋಜನೆಯ ಮೂಲಕ ಸಾಧ್ಯವಾಗಲಿದೆ. ಪಡಿತರ ಚೀಟಿಯಲ್ಲಿನ ಬದಲಾವಣೆ, ಕಾರ್ಡಿನ ಆದಾಯ, ಮನೆಯ ವಿಸ್ತೀರ್ಣ, ವಾಹನಗಳ ಮಾಹಿತಿ ಸಲ್ಲಿಕೆಗೆ ಅರ್ಜಿ ಈ ಯೋಜನೆ ಪ್ರಕಾರ ಸ್ವೀಕಾರವಾಗುವುದಿಲ್ಲ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries