ನವದೆಹಲಿ: 'ಕೋವಿಡ್-19 ವಿರುದ್ಧದ ಹೋರಾಟ ಅಂತಿಮ ಹಂತದಲ್ಲಿದೆ. ಇದು ಸಂಪೂರ್ಣವಾಗಿ ಮುಗಿಯುವ ಮುನ್ನವೇ ಕೋವಿಡ್ ಯೋಧರನ್ನು ನಿರಾಸೆಗೊಳಿಸಬೇಡಿ' ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಎಚ್ಚರಿಸಿದ್ದಾರೆ.
0
samarasasudhi
ನವೆಂಬರ್ 11, 2021
ನವದೆಹಲಿ: 'ಕೋವಿಡ್-19 ವಿರುದ್ಧದ ಹೋರಾಟ ಅಂತಿಮ ಹಂತದಲ್ಲಿದೆ. ಇದು ಸಂಪೂರ್ಣವಾಗಿ ಮುಗಿಯುವ ಮುನ್ನವೇ ಕೋವಿಡ್ ಯೋಧರನ್ನು ನಿರಾಸೆಗೊಳಿಸಬೇಡಿ' ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಎಚ್ಚರಿಸಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ವರ್ಚುವಲ್ ಸಂವಾದದ ನಡೆಸುವಾಗ ಅವರು, ಕೋವಿಡ್ ವಿರುದ್ಧದ ಹೋರಾಟವು ಅಂತಿಮ ಹಂತದಲ್ಲಿದೆ.
ಈಗಾಗಲೇ ಹಮ್ಮಿಕೊಂಡಿರುವ 'ಹರ್ ಘರ್ ದಸ್ತಕ್' ಅಭಿಯಾನದ ಸಮಯದಲ್ಲಿ ಇಡೀ ವಯಸ್ಕ ಜನಸಂಖ್ಯೆಗೆ ಮೊದಲ ಡೋಸ್ ನೀಡುವುದನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ವಯಸ್ಕ ಜನಸಂಖ್ಯೆಯಲ್ಲಿ ಶೇ 79ರಷ್ಟು ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಶೇ 38ರಷ್ಟು ಜನರು ಎರಡನೇ ಡೋಸ್ ಪಡೆದಿದ್ದಾರೆ ಎಂದು ಸಚಿವರು ಹೇಳಿದರು.
'ಕೋವಿಡ್ ಮುಗಿದಿದೆ ಎಂದು ನಾವು ಭಾವಿಸಬಾರದು. ಜಾಗತಿಕವಾಗಿ ಪ್ರಕರಣಗಳು ಹೆಚ್ಚುತ್ತಿವೆ. ಸಿಂಗಪುರ, ಬ್ರಿಟನ್, ರಷ್ಯಾ ಮತ್ತು ಚೀನಾದಲ್ಲಿ ಶೇ 80ಕ್ಕಿಂತ ಹೆಚ್ಚು ವ್ಯಾಕ್ಸಿನೇಷನ್ ಹೊರತಾಗಿಯೂ ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಲಸಿಕೆ ಮತ್ತು ಕೋವಿಡ್-ಸೂಕ್ತ ನಡವಳಿಕೆಯು ಜೊತೆಯಲ್ಲಿ ಸಾಗಬೇಕು' ಎಂದು ಅವರು ಒತ್ತಿ ಹೇಳಿದರು.