HEALTH TIPS

ಫೆಬ್ರವರಿ ಅಪಾಯ: ಭಾರತದಲ್ಲಿ ದಿನಕ್ಕೆ 1.5 ಲಕ್ಷ ಜನರಿಗೆ ಓಮಿಕ್ರಾನ್ ಸೋಂಕು!?

            ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಭೀತಿ ಹೆಚ್ಚುತ್ತಿದೆ. 2022ರ ಫೆಬ್ರವರಿ ತಿಂಗಳ ಹೊತ್ತಿಗೆ ದೇಶದಲ್ಲಿ ಅತಿಹೆಚ್ಚು ಓಮಿಕ್ರಾನ್ ಪ್ರಕರಣಗಳು ವರದಿಯಾಗುವ ಅಪಾಯವಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಕೊವಿಡ್-19 ಮೂರನೇ ಅಲೆಯು ಮುಂಬರುವ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು, ಅಲ್ಲಿಂದ ಮುಂದಿನ ಒಂದೇ ತಿಂಗಳಿನಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

            ಕಾನ್ಪುರ ಐಐಟಿಯ ಮಣೀಂದ್ರ ಅಗರವಾಲ್ ಮತ್ತು ಹೈದರಾಬಾದ್‌ ಐಐಟಿಯ ಎಂ ವಿದ್ಯಾಸಾಗರ್, ಮಾದರಿ ಸಹ ಸಂಸ್ಥಾಪಕರಾಗಿದ್ದಾರೆ. 2022ರ ಫೆಬ್ರವರಿ ತಿಂಗಳಿನಲ್ಲಿ ಭಾರತವು ಅತಿಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ದೇಶದಲ್ಲಿ ಪ್ರತಿನಿತ್ಯ 1.5 ರಿಂದ 1.8 ಲಕ್ಷ ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳಿರುತ್ತದೆ. ಭಾರತೀಯರು ಈಗಾಗಲೇ ಪಡೆದಿರುವ ಕೊವಿಡ್-19 ಲಸಿಕೆಯನ್ನು ಮೀರಿ ಓಮಿಕ್ರಾನ್ ಸೋಂಕು ಹರಡುವ ಸಾಮರ್ಥ್ಯವನ್ನು ಹೊಂದಿರುವುದೇ ನಿಜವಾದರೆ, ಫೆಬ್ರವರಿ ಹೊತ್ತಿಗೆ ಪರಿಸ್ಥಿತಿ ಕೈತಪ್ಪುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.


          

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries