ನವದೆಹಲಿ: ಕೋವಿಡ್ ಲಸಿಕೆ ಎರಡನೇ ಡೋಸ್ ಮತ್ತು ಮುಂಜಾಗ್ರತಾ ಕ್ರಮವಾಗಿ ಹಾಕಿಸಿಕೊಳ್ಳುವ ಮೂರನೇ ಡೋಸ್ (ಬೂಸ್ಟರ್ ಡೋಸ್) ನಡುವಣ ಅಂತರ ಒಂಬತ್ತರಿಂದ 12 ತಿಂಗಳವರೆಗೆ ಇರುತ್ತದೆ ಎಂದು ವರದಿಯಾಗಿದೆ.
0
samarasasudhi
ಡಿಸೆಂಬರ್ 26, 2021
ನವದೆಹಲಿ: ಕೋವಿಡ್ ಲಸಿಕೆ ಎರಡನೇ ಡೋಸ್ ಮತ್ತು ಮುಂಜಾಗ್ರತಾ ಕ್ರಮವಾಗಿ ಹಾಕಿಸಿಕೊಳ್ಳುವ ಮೂರನೇ ಡೋಸ್ (ಬೂಸ್ಟರ್ ಡೋಸ್) ನಡುವಣ ಅಂತರ ಒಂಬತ್ತರಿಂದ 12 ತಿಂಗಳವರೆಗೆ ಇರುತ್ತದೆ ಎಂದು ವರದಿಯಾಗಿದೆ.
ಕೋವಿಡ್ ಲಸಿಕೆ ಎರಡನೇ ಹಾಗೂ ಬೂಸ್ಟರ್ ಡೋಸ್ ನಡುವಣ ಅಂತರವು ಒಂಬತ್ತರಿಂದ 12 ತಿಂಗಳವರೆಗೆ ಇರಲಿದೆ.
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಗಳ ನಡುವಣ ಅಂತರವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.
ಶನಿವಾರ ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3ರಿಂದ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು.
ಜನವರಿ 10ರಿಂದ ಮುಂಚೂಣಿಯ ಕಾರ್ಯಕರ್ತರಿಗೂ ಮತ್ತು ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಶಿಫಾರಸಿನ ಮೇರೆಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದರು.
ಕೊರೊನಾ ರೂಪಾಂತರಿ ಓಮೈಕ್ರಾನ್ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನದ ಕುರಿತು ಪ್ರಧಾನಿ ಮೋದಿ ಮಹತ್ತರ ಘೋಷಣೆಯನ್ನು ಮಾಡಿದರು.