HEALTH TIPS

ಬಾಂಗ್ಲಾದೇಶಕ್ಕೆ ಶೇ 20 ರಷ್ಟು ಹೆಚ್ಚುವರಿ ವಿದ್ಯುತ್ ಪೂರೈಸಲಿದೆ ಭಾರತ

                  ಅಗರ್ತಲಾ : ಉಭಯ ದೇಶಗಳ ನಡುವಿನ ಒಪ್ಪಂದ ನವೀಕರಣದ ಭಾಗವಾಗಿ ಭಾರತವು ಬಾಂಗ್ಲಾದೇಶಕ್ಕೆ ಮುಂದಿನ ಐದು ವರ್ಷಗಳ ವರಗೆ ಶೇ 20 ರಷ್ಟು ಹೆಚ್ಚುವರಿ ವಿದ್ಯುತ್ ಶಕ್ತಿ ಪೂರೈಕೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                  ನವೀಕೃತ ಒಪ್ಪಂದದ ಪ್ರಕಾರ ತ್ರಿಪುರ ರಾಜ್ಯ ವಿದ್ಯುತ್ ಶಕ್ತಿ ನಿಗಮವು (ಟಿಎಸ್‌ಇಸಿಎಲ್‌) ಬಾಂಗ್ಲಾದೇಶಕ್ಕೆ ಈ ಹಿಂದೆ ಪೂರೈಸುತ್ತಿದ್ದ 160 ಮೆಗಾ ವ್ಯಾಟ್ ವಿದ್ಯುತ್ ಬದಲು, ಇನ್ನುಮುಂದೆ 192 ಮೆಗಾ ವ್ಯಾಟ್ ವಿದ್ಯುತ್ ಒದಗಿಸಲಿದೆ.

              ಭಾರತ ಮತ್ತು ಬಾಂಗ್ಲಾ, ವಿದ್ಯುತ್ ವ್ಯವಹಾರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ 2010ರ ಜನವರಿ 11ರಂದು ಸಹಿ ಹಾಕಿದ್ದವು. ಅದರ (ಒಪ್ಪಂದದ) ಅವಧಿಯು ಈ ವರ್ಷದ ಮಾರ್ಚ್‌ 16 ರಂದು ಮುಕ್ತಾಯವಾಗಿತ್ತು.

              ಟಿಎಸ್‌ಇಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌. ಕೆಲೆ ಮತ್ತು ನ್ಯಾಷನಲ್‌ ಥರ್ಮಲ್ ಪವರ್ ಕಾರ್ಪೊರೇಷನ್‌ನ (ಎನ್‌ಟಿಪಿಸಿ) ವಿದ್ಯುತ್ ವ್ಯಾಪಾರ ನಿಗಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್‌ ಸಕ್ಸೇನಾ ಅವರು ಭಾರತದ ಪರವಾಗಿ ನವೀಕೃತ ಒಪ್ಪಂದಕ್ಕೆ ಡಿಸೆಂಬರ್ 2ರಂದು ಡಾಕಾದಲ್ಲಿ ಸಹಿ ಹಾಕಿದ್ದಾರೆ. ಬಾಂಗ್ಲಾ ಪರವಾಗಿ ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಯ (ಬಿಪಿಡಿಬಿ) ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.

            ಒಪ್ಪಂದವು ಮಾರ್ಚ್‌ 17ರಿಂದಲೇ ಅನ್ವಯವಾಗುವಂತೆ ಜಾರಿಯಾಗಲಿದ್ದು, 2026ರ ಮಾರ್ಚ್ 16ರ ವರೆಗೆ ಚಾಲ್ತಿಯಲ್ಲಿರಲಿದೆ. ಒಪ್ಪಂದದ ಪ್ರಕಾರ ಮಾರ್ಪಾಡು ಮಾಡಲಾಗಿರುವ ಷರತ್ತು ಮತ್ತು ನಿಬಂಧನೆಗಳು ಇನ್ನಷ್ಟೇ ಅಂತಿಮವಾಗಬೇಕಿದೆ ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries