HEALTH TIPS

2020ರಲ್ಲಿ ಸಂಭವಿಸಿದ ಹೆದ್ದಾರಿ ಅಪಘಾತಗಳಲ್ಲಿ 48 ಸಾವಿರ ಮಂದಿ ಸಾವು: ಗಡ್ಕರಿ

                 ನವದೆಹಲಿ: 2020ರಲ್ಲಿ ಎಕ್ಸ್‌ಪ್ರೆಸ್‌ ರಸ್ತೆಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 47,984 ಜನ ಸಾವನ್ನಪ್ಪಿದ್ದಾರೆ ಎಂದು ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದರು.

             ಲೋಕಸಭೆಗೆ ನೀಡಿದ ಲಿಖಿತ ಉತ್ತರವೊಂದರಲ್ಲಿ ಅವರು ಈ ಮಾಹಿತಿ ನೀಡಿದರು. 2019ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 53,872 ಮಂದಿ ಅಸುನೀಗಿದ್ದಾರೆ ಎಂದೂ ಹೇಳಿದರು.

             ವಾಹನಗಳ ವಿನ್ಯಾಸ, ಸ್ಥಿತಿ, ರಸ್ತೆಗಳ ಪರಿಸ್ಥಿತಿ, ಅತಿವೇಗ, ಕುಡಿದು, ಮಾದಕ ದ್ರವ್ಯ ಸೇವಿಸಿ ಚಾಲನೆ, ಮೊಬೈಲ್‌ ಬಳಕೆ ಮೊದಲಾದವು ಅಪಘಾತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಗಡ್ಕರಿ ಹೇಳಿದರು.

              ರಸ್ತೆ ಸುರಕ್ಷತೆಗೆ ಎಲ್ಲಾ ಹಂತಗಳಲ್ಲಿ ತಜ್ಞರ ಸಹಾಯದಿಂದ ಸಚಿವಾಲಯ ಮಾರ್ಗಸೂಚಿಗಳನ್ನು ನೀಡಿದೆ ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries