ನವದೆಹಲಿ :ಒಂದೇ ದೇಶ ಒಂದು ಪಡಿತರ ಚೀಟಿ (ಒಎನ್‌ಓಆರ್‌ಸಿ) ಯೋಜನೆಯನ್ನು 25 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಆಹಾರ ಹಾಗೂ ಸಾರ್ವಜನಿಕ ವಿತರಣಾ ಸಚಿವಾಲಯ ಗುರುವಾರ ತಿಳಿಸಿದೆ.
0
samarasasudhi
ಡಿಸೆಂಬರ್ 31, 2021
ನವದೆಹಲಿ :ಒಂದೇ ದೇಶ ಒಂದು ಪಡಿತರ ಚೀಟಿ (ಒಎನ್‌ಓಆರ್‌ಸಿ) ಯೋಜನೆಯನ್ನು 25 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಆಹಾರ ಹಾಗೂ ಸಾರ್ವಜನಿಕ ವಿತರಣಾ ಸಚಿವಾಲಯ ಗುರುವಾರ ತಿಳಿಸಿದೆ.
ಉಳಿದ ಎರಡು ರಾಜ್ಯಗಳಾದ ಅಸ್ಸಾಂ ಹಾಗೂ ಚತ್ತೀಸ್‌ಗಢವನ್ನು ಶೀಘ್ರದಲ್ಲೇ ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು ಎಂದು ಸಚಿವಾಲಯ ಹೇಳಿದೆ.
ಒಂದೇ ದೇಶ ಒಂದೇ ಪಡಿತರ ಚೀಟಿ ಯೋಜನೆಯಡಿ 50 ಕೋಟಿ ಪಡಿತರ ವಹಿವಾಟುಗಳನ್ನು ನಡೆಸಲಾಗಿದ್ದು 34,100 ಕೋಟಿ ರೂ. ವೌಲ್ಯದ ಆಹಾರಧಾನ್ಯಗಳನ್ನು ಸಬ್ಸಿಡಿದರದಲ್ಲಿ ವಿತರಿಸಲಾಗಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.
ಕೇಂದ್ರ ಆಹಾರ ಹಾಗೂ ಸಾರ್ವಜನಿಕ ವಿತರಣೆ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಗುರುವಾರ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಡಿಸೆಂಬರ್ ತಿಂಗಳಿನಲ್ಲಿ ಅಂತರ್‌ರಾಜ್ಯ ಪಡಿತರ ವಹಿವಾಟುಗಳ ಸಂಖ್ಯೆ 2 ಲಕ್ಷವನ್ನು ದಾಟಿದೆ ಎಂದರು.
ಹಾಲಿ ಹಣಕಾಸು ವರ್ಷದ ಅಂತ್ಯದ ವೇಳೆಗೆ ಅಸ್ಸಾಂ ಹಾಗೂ ಚತ್ತೀಸ್‌ಗಢ ರಾಜ್ಯಗಳನ್ನು ಕೂಡಾ ಒಎನ್‌ಓಆರ್‌ಸಿ ಯೋಜನೆಯ ವ್ಯಾಪ್ತಿಗೆ ತರಲಾಗುವುದು ಎಂದರು.