ತ್ರಿಶೂರ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುತ್ತಿದ್ದ ಬಸ್ ಚಾಲಕನ ವಿರುದ್ಧ ಮೋಟಾರು ವಾಹನ ಇಲಾಖೆ ಪ್ರಕರಣ ದಾಖಲಿಸಿದೆ. ಖಾಸಗಿ ಬಸ್ 70 ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ತ್ರಿಶೂರ್‍ನಿಂದ ಪಾಲಕ್ಕಾಡ್‍ಗೆ ತೆರಳುತ್ತಿತ್ತು.
ಮುಂದಿನ ಸಾಲಿನಲ್ಲಿದ್ದ ಗೃಹಿಣಿ ತನ್ನ ಮೊಬೈಲ್‍ನಲ್ಲಿ ಚಾಲಕನ ಅಪರಾಧವನ್ನು ರೆಕಾರ್ಡ್ ಮಾಡಿದ್ದಾಳೆ. ಬಸ್ 60 ಕಿಮೀ / ಗಂ ವೇಗದಲ್ಲಿ ಚಲಿಸುತ್ತಿತ್ತು. ಚಾಲಕ ಒಂದು ಕೈಯಿಂದ ಬಸ್ ಸ್ಟಿಯರಿಂಗ್ ವ್ಹೀಲ್ ಹಿಡಿದು ಚಲಾಯಿಸುತ್ತಾ ಮತ್ತೊಂದು ಕೈಯಲ್ಲಿ ಮೊಬೈಲ್ ಸಂಭಾಷಣೆಯಲ್ಲಿ ಮಗ್ನನಾಗಿ ಸಂಚಾರ ಮುನ್ನಡೆಸುತ್ತಿದ್ದ. ಜೊತೆಗೆ ಮೊಬೈಲ್ ನಲ್ಲಿ ಟೈಪ್ ಮಾಡಲು ಯತ್ನಿಸುತ್ತಿದ್ದ. ಇದು ಬಹಳ ಹೊತ್ತಿನವರೆಗೆ ಮುಂದುವರಿದ ಬಳಿಕ ಗೃಹಿಣಿ ರಹಸ್ಯವಾಗಿ ಮೊಬೈಲ್ ನಲ್ಲಿ ನಕಲು ಮಾಡಿದ್ದಾರೆ.
ನಂತರ ಈ ದೃಶ್ಯಗಳೊಂದಿಗೆ ಮಹಿಳೆ ದೂರು ನೀಡಿದ್ದು ಚಾಲಕನ ವಿರುದ್ಧ ಮೋಟಾರು ವಾಹನ ಇಲಾಖೆ ಪ್ರಕರಣ ದಾಖಲಿಸಿದ್ದು, ಬಸ್ಸನ್ನೂ ವಶಕ್ಕೆ ಪಡೆಯಲಾಯಿತು. ವಾಹನ ಚಲಾಯಿಸುವಾಗ ಮೊಬೈಲ್ ಫೆÇೀನ್ ಬಳಕೆದಾರರನ್ನು ಹಿಡಿಯಲು ರಸ್ತೆಬದಿ ತಪಾಸಣೆಯನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ.




