ಕಾಸರಗೋಡು: ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಜಿಲ್ಲಾ ಸಐನಿಕ ಕಲ್ಯಾಣ ಕಚೇರಿ ವತಿಯಿಂದ ಯೋಧರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಗೌರವಿಸುವ ಕಾರ್ಯಕ್ರಮ ಜರುಗಿತು.
ನೌಕಾಪಡೆ ಪದಕ ವಿಜೇತ, ಭಾರತೀಯ ನೌಕಾಪಡೆ ಕ್ಯಾಪ್ಟನ್ ದಿ. ಮಧುಸೂಧನ ಕೋಡೋತ್ ಅವರ ಪತ್ನಿ ಸರೋಜ ಕೋಡೋತ್, ಸ್ಕ್ವಾಡ್ರನ್ ಲೀಡರ್ ನಾರಾಯಣನ್ ನಾಯರ್, ಸೇನಾಪಡೆ ಪದಕ ವಿಜೇತ ಕ್ಯಾಪ್ಟನ್ ಆರ್. ಪುರುಷೋತ್ತಮ, ಕ್ಯಾ. ಎಂ.ವಿ ವಿಜಯನ್ ನಾಯರ್, ಮೆನ್ಶನ್ ಇನ್ ಡೆಸ್ಪಾಚ್ ಹವೀಲ್ದಾರ್ ಅಬ್ದುಲ್ ರಹಮಾನ್ ಹಾಜಿ, ಸೇನಾ ಪದಕ ವಿಜೇತ, ದಿ. ಸುಬೇದಾರ್ ಎಂ. ಕುಞÂಕೃಷ್ಣನ್ ಅವರ ಪತ್ನಿ ಸರೋಜಿನಿ, ಸುಬೇದಾರ್ ದಿ. ಕುದಿರಮ್ಮಾಲ್ ತಂಬಾನ್ ಅವರ ಪತ್ನಿ ಪ್ರೇಮವಲ್ಲಿ, ದಿ. ನಾಯಕ್ ಕುಞÂಕಣ್ಣನ್ ಅವರ ಪತ್ನಿ ಲೀಲಾ ಅವರನ್ನು, ಅವರ ಮನೆಗೆ ತೆರಳಿ ಗೌರವಿಸಲಾಯಿತು.
ಸೈನಿಕ ಬೋರ್ಡ್ ಉಪಾಧ್ಯಕ್ಷ ಬ್ರಿಗೇಡಿಯರ್ ಟಿ.ಸಿ ಅಬ್ರಹಾಂ, ಇಸಿಎಚ್‍ಎಸ್ ಪ್ರಭಾರ ಅಧಿಕಾರಿ ಲೆ.ಕ. ಕಮಲಾಕ್ಷ, ಕ್ಯಾ, ತಂಬಾನ್ ನಂಬ್ಯಾರ್, ಸುಬೇದಾರ್ ಮೇಜರ್ ವೇಣುಗೋಪಾಲನ್, ಸುಬೇದಾರ್ ಸನ್ನಿ, ಹವೀಲ್ದಾರ್ ದಿನೇಶನ್, ಕಚೇರಿ ಸಿಬ್ಬಂದಿ ಚಂದ್ರನ್ ಪಿ, ಬಾಬು ಎ.ವಿ ಉಪಸ್ಥಿತರಿದ್ದರು.




