ಕಾಸರಗೋಡು: ಮಾನಸಿಕ, ಶಾರೀರಿಕ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಜಿಲ್ಲಾ ಪಂಚಾಯಿತಿ ಜಾರಿಗೊಳಿಸುತ್ತಿರುವ ಯೋಜನೆಯನ್ವಯ ಜಿಲ್ಲಾಮಟ್ಟದ ಕ್ರಿಯಾಸಮಿತಿಯಲ್ಲಿ ಒಳಪಡಿಸಿರುವ ಅಂಗವಿಕಲರಿಗಾಗಿ ತ್ರಿಚಕ್ರ ವಾಹನ ವಿತರಿಸಲಾಯಿತು.
ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಫಲಾನುಭವಿಗಳಿಗೆ ವಹನದ ಕೀಲಿಕೈ ವಿತರಿಸಿದರು. ಜಿಪಂ ಸ್ಥಾಯೀ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ಶಾನವಾಜ್ ಪಾದೂರ್ ಮುಖ್ಯ ಭಾಷಣ ಮಾಡಿದರು. ಜಿಪಂ ಸದಸ್ಯರಾದ ಗೀತಾಕೃಷ್ಣನ್, ಕೆ.ಶಕುಂತಳಾ, ಸರಿತಾ ಎಸ್.ಎನ್, ಸಿ.ಜೆ ಸಜಿತ್, ಜೋಮೋನ್ ಜೋಸ್, ಶೈಲಜಾ ಭಟ್ ಉಪಸ್ಥಿತರಿದ್ದರು. ಜಿಲ್ಲಾ ಸಾಮಾಜಿಕ ನೀತಿ ಕಚೇರಿ ಸೀನಿಯರ್ ಸೂಪರಿಂಟೆಂಡೆಂಟ್ ಜೋಯ್ಸೀ ಸಟೀಪನ್ ವರದಿ ಮಂಡಿಸಿದರು. ಜಿಪಂ ಕಾರ್ಯದರ್ಶಿ ನಂದಕುಮಾರ್ ಸ್ವಾಗತಿಸಿದರು. ಅರುಣ್ ಕುಮಾರ್ ವಂದಿಸಿದರು.
ಜಿಪಂ ವತಿಯಿಂದ ಒಟ್ಟು 110 ತ್ರಿಚಕ್ರ ವಾಹನ ಒದಗಿಸಲು ಯೋಜನೆಯಿರಿಸಲಾಗಿದ್ದು, ಪ್ರಥಮ ಹಂತದಲ್ಲಿ 40 ವಾಹನ ವಿತರಿಸಲಾಗಿದೆ.




