ಕಾಸರಗೋಡು: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 135 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ತರಬೇತಿಯನ್ನು ಪೂರ್ಣಗೊಳಿಸದೇ ಉದ್ಯೋಗ ಕಳೆದುಕೊಂಡ ಉದ್ಯೋಗಾಕಾಂಕ್ಷಿಗಳಿಗೆ ಆದ್ಯತೆ ನೀಡಲು ಡಿಡಿಯುಜಿಕೆವೈ/ಯುವಕೇರಳ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿಟಿ ಸುರೇಂದ್ರನ್ ಉದ್ಘಾಟಿಸಿದರು. ಪ್ರಕಾಶನ್ ಪಾಳಾಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಸರಗೋಡು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಭಾಗವಹಿಸಿದ್ದರು. ಓರಿಕ್ಸ್ ವಿಲೇಜ್, ಪ್ಯಾಲೇಸ್ ಆಸ್ಪತ್ರೆ, ಫಾಲ್ಕನ್ ಇನ್‍ಸ್ಟಿಟ್ಯೂಟ್, ಸಿಗ್ನೇಚರ್ ಹೋಂಡಾ, ಬಿಗ್ ಬಜಾರ್, ಕೆವಿಆರ್, ಗಿರಿಜಾ ಗ್ರೂಪ್, ಎಬಿಸಿ ಸೇಲ್ಸ್, ವೈ.ಸಿ.,ಆಂಟಿಕ್ ಜ್ಯುವೆಲರಿ, ಸಿಗ್ನೇಚರ್ ಮೋಟಾರ್ಸ್ ಮತ್ತು ಯಾರಾ ವೆಡ್ಡಿಂಗ್ ಸೇರಿದಂತೆ 12 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು. ಕುಟುಂಬಶ್ರೀ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ರೇಷ್ಮಾ ಸ್ವಾಗತಿಸಿ, ಬ್ಲಾಕ್ ಸಂಯೋಜಕ ಅಖಿಲ ವಂದಿಸಿದರು.




