ಕಣ್ಣೂರು: ಕಣ್ಣೂರಿನಲ್ಲಿ ಯುವಕನೊಬ್ಬನನ್ನು ಇರಿದು ಕೊಲೆ ಮಾಡಲಾಗಿದೆ. ಮೃತನನ್ನು ಮತೌಲ್ ಸೌತ್ ಬೀಚ್‍ನ ಕೆ ಹಿಶಾಮ್ (28) ಎಂದು ಗುರುತಿಸಲಾಗಿದೆ. ಮೊಬೈಲ್ ಚಾಟಿಂಗ್ ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಪರಿಸಮಾಪ್ತಿಗೊಂಡಿತು. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಸಾಜಿದ್ ಎಂಬಾತ ಹಾಶಿಮ್ ಹಾಗೂ ಇತರ ಇಬ್ಬರು ಸ್ನೇಹಿತರನ್ನು ಆಕ್ರಮಿಸಿದ ಆರೋಪಿ. ಗಾಯಗೊಂಂಡವರಲ್ಲಿ ಒಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾಪತ್ತೆಯಾಗಿರುವ ಸಾಜಿದ್ ಗಾಗಿ ಪೋಲೀಸರು ಹುಡುಕಾಟ ನಡೆಸಿದ್ದಾರೆ.




