HEALTH TIPS

ದೇಶದ ಶೇ. 60 ರಷ್ಟು ವಯಸ್ಕರು ಸಂಪೂರ್ಣ ಎರಡು ಡೋಸ್ ಲಸಿಕೆ ಪಡೆದಿದ್ದಾರೆ: ಕೇಂದ್ರ

      ನವದೆಹಲಿ: ಭಾರತದಲ್ಲಿ ಅರ್ಹ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಜನರು ಸಂಪೂರ್ಣ ಎರಡೂ ಡೋಸ್ ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಗುರುವಾರ ಹೇಳಿದ್ದಾರೆ.

      "ಹೊಸ ಸಾಧನೆಗಳನ್ನು ಮಾಡುತ್ತಿರುವ ಭಾರತಕ್ಕೆ ಅಭಿನಂದನೆಗಳು. ಸಾರ್ವಜನಿಕ ಭಾಗವಹಿಸುವಿಕೆ ಮತ್ತು ನಮ್ಮ ಆರೋಗ್ಯ ಕಾರ್ಯಕರ್ತರ ಸಮರ್ಪಿತ ಪ್ರಯತ್ನಗಳ ನೆರವಿನಿಂದ, ದೇಶದ ಶೇ. 60 ಕ್ಕಿಂತ ಹೆಚ್ಚು ವಯಸ್ಕರು ಈಗ ಸಂಪೂರ್ಣವಾಗಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ" ಎಂದು ಮಾಂಡವಿಯಾ ಅವರು ಟ್ವೀಟ್‌ ಮಾಡಿದ್ದಾರೆ.

      ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಭಾರತದ ವಯಸ್ಕರಲ್ಲಿ ಸುಮಾರು ಶೇ 89 ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ 70,17,671 ಡೋಸ್‌ ಲಸಿಕೆ ನೀಡುವುದರೊಂದಿಗೆ ದೇಶದಲ್ಲಿ COVID-19 ಲಸಿಕೆ ಪಡೆದ ಡೋಸ್‌ಗಳ ಸಂಖ್ಯೆ 139.70 ಕೋಟಿ ದಾಟಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries