ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 77 ನೇ ವಾರ್ಷಿಕೋತ್ಸವ, ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಸಮಾರಂಭ ಡಿ. 18 ರಂದು ಶನಿವಾರ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ.
ಪೂರ್ವಾಹ್ನ 9-30ಕ್ಕೆ ಗಣಹೋಮ, ಶ್ರೀ ಗೋಪಾಲಕೃಷ್ಣ ದೇವರ ಪೂಜೆ, 10 ರಿಂದ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅವರಿಂದ ಭಗವದ್ಗೀತೆಯ ವಾಚನ ಮತ್ತು ಪ್ರವಚನ ನಡೆಯಲಿದೆ. 11 ರಿಂದ ಪಾರ್ಥ ಸಾರಥ್ಯ ಯಕ್ಷಗಾನ ತಾಳಮದ್ದಳೆ ಹಾಗೂ ಭಕ್ತಿಗೀತೆ, ಭಾವಗೀತೆಗಳ ಗಾಯನ ನಡೆಯಲಿದೆ. ಮಧ್ಯಾಹ್ನ 12.45ಕ್ಕೆ ಭೋಜನ, ಅಪರಾಹ್ನ 2 ರಿಂದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ರಾಜ್ಯೋತ್ಸವ ಕೃಷಿ ಪ್ರಶಸ್ತಿ ವಿಜೇತ ಕಡಮಜಲು ಸುಭಾಷ್ ರೈ ಅಧ್ಯಕ್ಷತೆ ವಹಿಸುವರು. ಬಹುಭಾಷಾ ಪ್ರಸಂಗಕರ್ತ, ಸಾಹಿತಿ ಡಾ. ಡಿ. ಸದಾಶಿವ ಭಟ್ಟ ಬೆಟ್ಟಂಪಾಡಿ ಅವರಿಗೆ ಕೀರಿಕ್ಕಾಡು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರತಿಭಾ ವಿದ್ಯಾಲಯ ಸುಳ್ಯದ ಪ್ರಾಚಾರ್ಯ ವೆಂಕಟರಾಮ ಭಟ್ಟ ಅ|ಭಿನಂದನಾ ಭಾಷಣ ಮಾಡುವರು. ಎ. ಊಜಂಪಾಡಿ ಶ್ರೀಶಾಸ್ತಾರ ದೇವಸ್ಥಾನದ ಮೊಕ್ತೇಸರ ನಾರಾಯಣ್ ನಾೈಕ್ ಶುಭಹಾರೈಸುವರು. ಮೀಂಜ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯಂ. ಪ್ರಭಾಕರ ರೈ ಕೀರಿಕ್ಕಾಡು ಸಂಸ್ಮರಣೆಗೈಯ್ಯುವರು. ಉದ್ಯಮಿ ಕೆ. ಚಂದ್ರಶೇಖರ ರೈ ಕಲ್ಲಡ್ಕ ಉಪಸ್ಥಿತರಿರುವರು. ಬಳಿಕ 3-15ರಿಂದ ಕರ್ಣಪರ್ವ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 6 ರಿಂದ ಸರೋಜಿನಿ ಬನಾರಿ ಹಾಗೂ ಯಶಸ್ವಿ ಅಡ್ಕಾರು ಅವರ ನಿರ್ದೇಶನದಲ್ಲಿ ಭರತನಾಟ್ಯ ಮತ್ತು ಜಾನಪದ ನೃತ್ಯ ಕಲಾ ವೈವಿಧ್ಯ ನಡೆಯಲಿದೆ.




