HEALTH TIPS

ಪ್ಲಸ್ ಒನ್‌ಗೆ 79 ಹೆಚ್ಚುವರಿ ತಾತ್ಕಾಲಿಕ ಬ್ಯಾಚ್‌ಗಳ ನಿಗದಿ: ಆದ್ಯತೆಯ ಬ್ಯಾಚ್‌ಗಳಲ್ಲಿ ಸೀಟುಗಳಿಲ್ಲವೆಂಬ ವ್ಯಾಪಕ ದೂರುಗಳ ಅನುಸರಿಸಿ ಕ್ರಮ


       ತಿರುವನಂತಪುರ: ರಾಜ್ಯದಲ್ಲಿ ತಾತ್ಕಾಲಿಕವಾಗಿ ಪ್ಲಸ್ ಒನ್ ಗೆ 79 ಹೆಚ್ಚುವರಿ ಬ್ಯಾಚ್ ಗಳನ್ನು ನಿಗದಿಪಡಿಸಲಾಗಿದೆ.  ಅರ್ಹ ವಿದ್ಯಾರ್ಥಿಗಳು ಆದ್ಯತೆಯ ಬ್ಯಾಚ್‌ಗಳಲ್ಲಿ ಪ್ರವೇಶ ಲಭಿಸುತ್ತಿಲ್ಲ ಎಂಬ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
       ಹತ್ತು ಹೆಚ್ಚುವರಿ ಬ್ಯಾಚ್‌ಗಳನ್ನು ವಾಣಿಜ್ಯ ಮತ್ತು ನಲವತ್ತೊಂಬತ್ತು ಮಾನವಿಕ ವಿಭಾಗಗಳಿಗೆ ನಿಗದಿಪಡಿಸಲಾಗಿದೆ.  20 ವಿಜ್ಞಾನ ಬ್ಯಾಚ್‌ಗಳನ್ನು ಸಹ ನಿಗದಿಪಡಿಸಲಾಗಿದೆ.  ವಿದ್ಯಾರ್ಥಿಗಳು ಮತ್ತು ಪೋಷಕರ ಅಗತ್ಯಕ್ಕೆ ಅನುಗುಣವಾಗಿ 20 ವಿಜ್ಞಾನ ಬ್ಯಾಚ್‌ಗಳನ್ನು ನಿಗದಿಪಡಿಸಲಾಗಿದೆ.   ಅಂಕಗಳಲ್ಲಿ ಅಲ್ಪ ವ್ಯತ್ಯಾಸದಿಂದ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ವಿಜ್ಞಾನ ಬ್ಯಾಚ್‌ಗಳಿಗೆ ಪ್ರವೇಶ ಕಳೆದುಕೊಳ್ಳುತ್ತಿರುವರು.  ಈ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದವು.  ಈ ಹಿನ್ನೆಲೆಯಲ್ಲಿ ಈ ಕ್ರಮ ಕ್ಯೆಗೊಳ್ಳಲಾಗಿದೆ.
       ತಾಲೂಕುವಾರು ಗಣನೆಯ ನಂತರ ಶಿಕ್ಷಣ ಇಲಾಖೆ ಸೀಟು ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿತು.  ವಿದ್ಯಾರ್ಥಿಗಳು ಮತ್ತು ಪೋಷಕರ ದೂರುಗಳು ಮತ್ತು ಅರ್ಜಿಗಳನ್ನು ಪರಿಗಣಿಸಲಾಗಿದೆ ಎಂದು ಶಿಕ್ಷಣ ಸಚಿವ  ಶಿವಂಕುಟ್ಟಿ ಸ್ಪಷ್ಟಪಡಿಸಿದ್ದಾರೆ.  ಎಲ್ಲವನ್ನೂ ಪರಿಶೀಲಿಸಿ 79 ಹೆಚ್ಚುವರಿ ಬ್ಯಾಚ್‌ಗಳನ್ನು ಮಂಜೂರು ಮಾಡಲು ನಿರ್ಧರಿಸಲಾಯಿತು.
         ತಾತ್ಕಾಲಿಕ ಬ್ಯಾಚ್ ಗಳನ್ನು ಒದಗಿಸಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಹುದ್ದೆಗಳು ಸೇರಿದಂತೆ ಶಾಲಾ ಕಾಂಬಿನೇಷನ್ ವರ್ಗಾವಣೆಗೆ ಡಿಸೆಂಬರ್ 14ರಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries