ಬದಿಯಡ್ಕ: ಗ್ರಾಮ ವಿಕಾಸ ಸಮಿತಿ ಮುಗು ಇದರ ನೇತೃತ್ವದಲ್ಲಿ ಶ್ರೀ ಈರ್ವರು ಉಳ್ಳಾಕ್ಲು ಗೆಳೆಯರ ಬಳಗ ಮಾಡ, ಶ್ರೀ ವಿಷ್ಣು ಕಲಾವೃಂದ ವಿಷ್ಣು ನಗರ ಮುಂಡಿತ್ತಡ್ಕ ಹಾಗೂ ಷಣ್ಮುಖ ಮಿತ್ರವೃಂದ ಷಣ್ಮುಖ ನಗರ ಮುಗು ಇವುಗಳ ಸಾರಥ್ಯದಲ್ಲಿ ಈ-ಶ್ರಮ್ ಕಾರ್ಡು ನೋಂದಾವಣಾ ಶಿಬಿರವು ಮುಂಡಿತ್ತಡ್ಕದ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಯಶಸ್ವಿಯಾಗಿ ಜರಗಿತು.
ಶಿಬಿರವನ್ನು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಗ್ರಾಮಾಂತರ ಗ್ರಾಮ ವಿಕಾಸ ಸಮಿತಿ ಸಂಚಾಲಕ ಕೃಷ್ಣರಾಜ್ ಪೆರ್ಲ ಅವರು ಭಾಗವಹಿಸಿದರು. ವಿಷ್ಣು ಕಲಾವೃಂದದ ಹಿರಿಯ ಸದಸ್ಯರೂ ಮಾರ್ಗದರ್ಶಕರೂ ಆದ ಚಿದಾನಂದ ಆಳ್ವ ಮಂಜಕೊಟ್ಟಿಗೆ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಪ್ರಧಾನ ಅರ್ಚಕ ಭಾಸ್ಕರ ಪೂಜಾರಿ ಬೀರಿಕುಂಜ ಹಾಗೂ ಗ್ರಾಮ ವಿಕಾಸ ಸಮಿತಿ ಮುಗು ಇದರ ಅಧ್ಯಕ್ಷ ಉದಯ ಕುಮಾರ ಅರಿಯಪ್ಪಾಡಿ ಉಪಸ್ಥಿತರಿದ್ದರು. ಶ್ರೀ ವಿಷ್ಣು ಕಲಾವೃಂದದ ಅಧ್ಯಕ್ಷ ಸುನಿಲ್ ಮಾಸ್ತರ್ ವಿಷ್ಣುನಗರ ಮುಂಡಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ನಿರೂಪಿಸಿದರು.ಮುಗು ಗ್ರಾಮ ವಿಕಾಸ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾಂತ ಕುಮಾರ್ ವಿಷ್ಣು ನಗರ ಮುಂಡಿತ್ತಡ್ಕ ವಂದಿಸಿದರು.




