ನವದೆಹಲಿ: ಅಫ್ಗಾನಿಸ್ತಾನ ತಾಲಿಬಾನ್ ವಶವಾದ ನಂತರ ಮಾನವೀಯ ನೆರವಿನ ಮೊದಲ ಕಂತಿನ ರೂಪದಲ್ಲಿ ಭಾರತವು ಅಫ್ಗಾನಿಸ್ತಾನಕ್ಕೆ ವೈದ್ಯಕೀಯ ಸಲಕರಣೆಗಳನ್ನು ಶನಿವಾರ ಸರಬರಾಜು ಮಾಡಿದೆ.
0
samarasasudhi
ಡಿಸೆಂಬರ್ 11, 2021
ನವದೆಹಲಿ: ಅಫ್ಗಾನಿಸ್ತಾನ ತಾಲಿಬಾನ್ ವಶವಾದ ನಂತರ ಮಾನವೀಯ ನೆರವಿನ ಮೊದಲ ಕಂತಿನ ರೂಪದಲ್ಲಿ ಭಾರತವು ಅಫ್ಗಾನಿಸ್ತಾನಕ್ಕೆ ವೈದ್ಯಕೀಯ ಸಲಕರಣೆಗಳನ್ನು ಶನಿವಾರ ಸರಬರಾಜು ಮಾಡಿದೆ.
ಅಫ್ಗನ್ ಜನರ ಸಂಕಷ್ಟದ ಸಮಯದಲ್ಲಿ ನೆರವು ನೀಡುವ ಬದ್ಧತೆಯ ಭಾಗವಾಗಿ ಭಾರತ ಈ ಕ್ರಮ ಕೈಗೊಂಡಿದೆ.
ಹತ್ತು ಮಂದಿ ಭಾರತೀಯರು ಮತ್ತು 94 ಮಂದಿ ಅಫ್ಗನ್ನರನ್ನು ಕಾಬೂಲ್‌ನಿಂದ ಶುಕ್ರವಾರ ದೆಹಲಿಗೆ ಕರೆತಂದಿದ್ದ ವಿಮಾನದಲ್ಲೇ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಕಾಬೂಲ್‌ನಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಹೇಳಿದೆ.
'ವೈದ್ಯಕೀಯ ಸಾಮಗ್ರಿಗಳನ್ನು ಕಾಬೂಲ್‌ನಲ್ಲಿಯ ವಿಶ್ವ ಆರೋಗ್ಯ ಸಂಸ್ಥೆ (ಡಬ್ಯುಎಚ್‌ಒ) ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಗುವುದು. ನಂತರ ಇವುಗಳನ್ನು ಅಲ್ಲಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಬಳಸಲಾಗುವುದು' ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.