HEALTH TIPS

ಉನ್ನತ ವಿದ್ಯಾಭ್ಯಾಸ, ಮಹಿಳಾ ಸಬಲೀಕರಣದಲ್ಲಿ ಕೇರಳದ ಸಾಧನೆ ಮಹತ್ತರ: ರಾಷ್ಟ್ರಪತಿ ರಾಮನಾಥ ಕೋವಿಂದ್: ಪೆರಿಯದಲ್ಲಿ ಘಟಿಕೋತ್ಸವದಲ್ಲಿ ಪದವಿ ಪ್ರದಾನಗೈದು ಅಭಿಮತ

                                          

                 ಕಾಸರಗೋಡು: ಉನ್ನತ ವಿದ್ಯಾಭ್ಯಾಸ, ಸಾಕ್ಷರತೆ ಹಾಗೂ ಮಹಿಳಾ ಸಬಲೀಕರಣದಲ್ಲಿ ಕೇರಳದ ಸಾಧನೆ ಮಹತ್ತರವಾದುದು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ತಿಳಿಸಿದ್ದಾರೆ. ಅವರು ಮಂಗಳವಾರ ಕೇರಳ ಕೇಂದ್ರ ವಿಶ್ವ ವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಐದನೇ ಘಟಿಕೋತ್ಸವದಲ್ಲಿ ಪದವಿಪ್ರದಾನ ನಡೆಸಿ ಮಾತನಾಡಿದರು.


           ಸಾಮಾಜಿಕ ಪರಿವರ್ತನೆ ಹಾಗೂ ಸಬಲೀಕರಣಕ್ಕೆ ವಿದ್ಯಾಭ್ಯಾಸ ಸಂಸ್ಥೆಗಳು ಪಣತೊಡಬೇಕು. ಬ್ರಹ್ಮಶ್ರೀ ನಾರಾಯಣಗುರುಗಳ ಉಕ್ತಿಯಂತೆ ಶಿಕ್ಷಣವು ವಿದ್ಯಾರ್ಥಿಯ ಜೀವನಮಟ್ಟದ ಜತೆಗೆ ಸಮಾಜವನ್ನು ಉನ್ನತಿಗೇರಿಸುತ್ತದೆ. ವಿದ್ಯೆಯಿಂದ ಮಾತ್ರ ಪ್ರಬುದ್ಧರಾಗಲು ಸಾದ್ಯ. 2020ನೇ ರಾಷ್ಟ್ರೀಯ ಶಿಕ್ಷಣ ನೀತಿ  ಒಂದು ಕ್ರಮಬದ್ಧ ಯೋಜನೆಯಾಗಿದ್ದು, ವಿದ್ಯಾರ್ಥಿಗಳ ಭಾವೀ ಜೀವನ ಸುಗಮಗೊಳಿಸಲು ಸಹಕಾರಿಯಾಗಲಿದೆ. ಪದವಿ ಪಡೆದವರಲ್ಲಿ ಬಹುತೇಕ ಮಂದಿ ವಿದ್ಯಾರ್ಥಿನಿಯರಾಗಿದ್ದು, ಇದು ಅಭಿಮಾನಕರ ವಿಷಯವಾಗಿದೆ ಎಂದು ತಿಳಿಸಿದರು.  


                ಕಟ್ಟುನಿಟ್ಟಿನ ಕೋವಿಡ್ ಮಾನದಂಡ ಪಲನೆಯೊಂದಿಗೆ ಪ್ರತ್ಯೇಕವಾಗಿ ಸಜ್ಜುಗೊಳಿಸಲಾದ ವೇದಿಕೆಯಲ್ಲಿ ಐದನೇ ಘಟಿಕೋತ್ಸವ, ಪದವಿಪ್ರದಾನ ಸಮಾರಂಭ ನಡೆಸಲಾಯಿತು. ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್, ಸ್ಥಳೀಯಾಡಳಿತ ಖಾತೆ ಸಚಿವ ಎಂ.ವಿ ಗೋವಿಂದನ್ ಉಪಸ್ಥಿತರಿದ್ದರು.  ವಿಶ್ವ ವಿದ್ಯಾಲಯ ರಿಜಿಸ್ಟ್ರಾರ್ ಡಾ. ಎಂ. ಸಂತೋಷ್‍ಕುಮಾರ್, ವಿ.ವಿ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಂ. ಮುರಳೀಧರನ್ ನಂಬ್ಯಾರ್ ಮುಂತಾದವರು ಪಾಲ್ಗೊಂಡಿದ್ದರು.ಪಸ್‍ಗೆ ಆಗಮಿಸಿದ ರಾಷ್ಟ್ರಪತಿ ಅವರನ್ನು ಡೆಫೆನ್ಸ್ ಬ್ಯಾಂಡ್‍ನೊಂದಿಗೆ ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು.


               2018-2020ನೇ ಸಾಲಿನ ಪದವಿಪ್ರದಾನ ನಡೆಸಲಾಯಿತು. 29ಮಂದಿಗೆ ಪದವಿ, 652ಮಂದಿಗೆ ಸ್ನಾತಕೋತ್ತರ ಪದವಿ, 52ಮಂದಿಗೆ ಪಿ.ಎಚ್.ಡಿ ಹಾಗೂ ಒಂಬತ್ತು ಮಂದಿಗೆ ಪಿ.ಜಿ ಡಿಪ್ಲೊಮಾ ಪದವಿ ಪ್ರದಾನ ಮಾಡಲಾಯಿತು. ಒಫೀಶೀಯೇಟಿಂಗ್ ಉಪ ಕುಲಪತಿ ಪ್ರೊ. ಕೆ.ಸಿ ಬೈಜು ಸ್ವಾಗತಿಸಿದರು. 

               ಕೋವಿಡ್ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಏರ್ಪಡಿಸಲಾಗಿತ್ತು.  ಸರ್ಕಾರದ ವಿಶೇಷಾನುಮತಿಯೊಂದಿಗೆ  700ಮಂದಿಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಎರಡು ಡೋಸ್ ವ್ಯಾಕ್ಸಿನೇಶನ್ ಪಡೆದವರು, 72ತಾಸುಗಳೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು.  ವೇದಿಕೆ ಆಸುಪಾಸು ಪಾಲ್ಗೊಳ್ಳುವವರಿಗೆ ಕಾರ್ಯಕ್ರಮದಂದು ಬೆಳಗ್ಗೆ ನಡೆಸಿದ ರ್ಯಾಂಡಮ್ ಆ್ಯಂಟಿಜೆನ್ ತಪಾಸಣೆ ವರದಿ ಕಡ್ಡಾಯಗೊಳಿಸಲಾಗಿತ್ತು.


                          ರಾಷ್ಟ್ರಪತಿ ಭಾಷಣದ ಮುಖ್ಯಾಂಶ:

*ದೇವರ ಸ್ವಂತ ನಾಡಾಗಿರುವ ಕೇರಳದ ಕಳಶಪ್ರಾಯವಾಗಿರುವ ಕಾಸರಗೋಡು ಉತ್ತರದ ಸೌಂದರ್ಯಭರಿತ ನಾಡಾಗಿದೆ. ವಿಶ್ವ ವಿದ್ಯಾಲಯದ ಪ್ರದೇಶವೂ ಮನಮೋಹಕ ತಾಣವಾಗಿದೆ.

*ಬಹುಭಾಷೆಗಳ ಸಂಗಮ ಭೂಮಿಯಾಗಿರುವ ಕಾಸರಗೋಡು ಜೈವ ವೈವಿಧ್ಯತೆಗೂ ಸಾಕ್ಷಿಯಾಗಿದೆ. ಇಲ್ಲಿನ ಬಹುಭಾಷಾ ಸಂಸ್ಕøತಿ ಮತ್ತು ಜೀವ ವೈವಿಧ್ಯವನ್ನು ಸಂರಕ್ಷಿಸುವುದೂ ನಮ್ಮೆಲ್ಲರ ಹೊಣೆಯಾಗಬೇಕು.

* ವಿಶ್ವ ವಿದ್ಯಾಲಯದಲ್ಲಿ ಪದವಿ ಪೂರೈಸಿರುವ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ. ಇದಕ್ಕೆ ಕಾರಣಕರ್ತರಾದ ವಿಶ್ವವಿದ್ಯಾಲಯದ ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದನಾರ್ಹರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries