ಕಾಸರಗೋಡು: ಪುಳ್ಕೂರು ಶ್ರೀ ಮಹಾದೇವ ಬಾಲಗೋಕುಲದ ಉದ್ಘಾಟನೆ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಬ್ರಹ್ಮಶ್ರಿ ಉಳಿಯ ವಿಷ್ಣು ತಂತ್ರಿ ನೂತನ ಬಾಲಗೋಕುಲವನರ್ನು ಉದ್ಘಾಟಿಸಿದರು. ದಿವ್ಯಹಸ್ತ ದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ವನ್ನು ಪ್ರಾರಂಭಿಸಲಾಯಿತು. ನಾತನ ಬಾಲಗೋಕುಲದ ಮಕ್ಕಳಿಂದ ಗಣಪತಿ ಪ್ರಾರ್ಥನೆ ಮತ್ತು ದೀಪಸ್ತುತಿ ನಡೆಯಿತು.
ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಆಡಳಿತ ಸಮೀತಿ ಅಧ್ಯಕ್ಸ ಶ್ರೀ ಶೀನ ಶೆಟ್ಟಿ ಯವರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವ್ಯವಸ್ಥಾ ಪ್ರಮುಖ ಶಂಕರ ನಾರಾಯಣ ಭಟ್ ಬೌದ್ಧಿಕ್ ನೀಡಿದರು. ತಾಲೂಕು ಬಾಲಗೋಕುಲ ಅಧ್ಯಕ್ಸರಾದ ಶ್ರೀ ಜಯರಾಮ್ ಶೆಟ್ಟಿ.ದೇವಸ್ಥಾನದ ಪ್ರದಾನ ಅರ್ಚಕ ಪ್ರಭಾಕರ ಕಾರಂತ್, ಬಾಲಗೋಕುಲ ಮೊಗ್ರಲ್ ಪುತ್ತೂರು ಮಂಡಲ ಪ್ರಮುಖ್ ಗಣೇಶ್ ಕೇಳುಗುಡ್ಡೆ, ಸನಾತನ ಬಾಲಗೋಕುಲ ಪ್ರಮುಕ್ ಹರ್ಷ ರಾಜ್, ಮಹಾದೇವ ಬಾಲಗೋಕುಲ ಪ್ರಮುಕ್ ರಾಕೇಶ್ ಪಕಳ, ಕಾಸರಗೋಡು ಮಹಾ ಮಂಡಲ ಪ್ರಮುಕ್ ಬಾಲಚಂದ್ರ ಕೋರುವೈಲ್ ಉಪಸ್ಥಿತರಿದ್ದರು. ಮಹಾದೇವ ಬಾಲಗೋಕುಲದ ಶಿಕ್ಷಕಿ ತನುಜಾ ಸ್ವಾಗತಿಸಿದರು. ದೇವಸ್ಥಾನ ಸಮಿತಿ ಪ್ರದಾನಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಅಡ್ಕ ಕಾರ್ಯಕ್ರಮ ನಿರೂಪಿಸಿದರು. ಸಹಪ್ರಮುಕ್ ಶೈಲೇಶ್ ಮಯ್ಯ ವಂದಿಸಿದರು ಕಾರ್ಯಕ್ರಮ ದಲ್ಲಿ ಬಾಲಗೋಕುಲ ತಾಲೂಕು ಪ್ರದಾನ ಕಾರ್ಯದರ್ಶಿ ದೇವದಾಸ ಕಾಮತ್ ತರಗತಿ ನಡೆಸಿದರು.




