HEALTH TIPS

ಉಚಿತ ನೇತ್ರ ತಪಾಸಣಾ ಹಾಗೂ ಕನ್ನಡಕ ವಿತರಣಾ ಶಿಬಿರ: ಶಿಬಿರದಲ್ಲಿ ಮೂನ್ನೂರಕ್ಕೂ ಹೆಚ್ಚು ಮಂದಿ ಭಾಗಿ

  

          

               ಕುಂಬಳೆ: ಶಿರಿಯಾ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಮತ್ತು ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸ0ಭ್ರ ಮ  ಸಮಿತಿಯ ಮಂಜೇಶ್ವರ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಎಸ್ಸಿಲಾರ್ ವಿಷನ್ ಫೌಂಡೇಶನ್, ಬೆಂಗಳೂರು ಮತ್ತು ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿತ ಆಸ್ಪತ್ರೆ, ಮಂಗಳೂರು ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಕನ್ನಡಕ ವಿತರಣಾ ಶಿಬಿರ ಭಾನುವಾರ ಶಿರಿಯಾ ಶ್ರೀ ಸತ್ಯಸಾಯಿ ಗ್ರಾಮ ಸೇವಾ ಕೇಂದ್ರದಲ್ಲಿ ಜರಗಿತು.

              ಶಿಬಿರವನ್ನು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಇದರ ಕಾಸರಗೋಡು ಜಿಲ್ಲಾಧ್ಯಕ್ಷ ಎಚ್.ಮಹಾಲಿಂಗ ಭಟ್ ದೀಪ ಬೆಳಗಿಸಿ ಸಾಮೂಹಿಕ ಓಂಕಾರ ಮಂತ್ರ ಉಚ್ಛರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಇಂತಹ ಸಾಮಾಜಿಕ ಕಳಕಳಿ ಹೊಂದಿರುವಂತಹ ಚಟುವಟಿಕೆಗಳು ಸತ್ಯಸಾಯಿ ಬಾಬಾ ಅವರಿಗೆ ಅತ್ಯಂತ ಪ್ರಿಯವಾಗಿದ್ದು, ಸಮಾಜದ ಆರೋಗ್ಯಕರ ಬೆಳವಣಿಗೆಗೆ  ಅತ್ಯಂತ ಸಹಕಾರಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸತ್ಯಸಾಯಿ ಸೇವಾ ಸಂಸ್ಥೆಗಳ ಉಪಾಧ್ಯಕ್ಷ ರಾಮಚಂದ್ರ. ಸಿ. ಉಪ್ಪಳ, ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಸಹಿತ ಗಣ್ಯರು ಉಪಸ್ಥಿತರಿದ್ದರು.


                  ಪ್ರಸಾದ್ ನೇತ್ರಾಲಯದ ಪಿಆರ್‍ಒ ಸಯ್ಯದ್, ಎಸ್ಸಿಲಾರ್ ವಿಷನ್ ಫೌಂಡೇಶನ್‍ನ ಹಿರಿಯ ವ್ಯವಸ್ಥಾಪಕ ಧರ್ಮ ಪ್ರಸಾದ ರೈ ಅವರು ಮಾತನಾಡಿ, ಕಣ್ಣಿನ ಆರೋಗ್ಯ ಮತ್ತು ತಪಾಸಣೆಯ ಪ್ರಾಮುಖ್ಯತೆಯ ಕುರಿತು ಮಾಹಿತಿ ನೀಡಿದರು. 

            ಶಿಬಿರದಲ್ಲಿ 350 ಮಂದಿ ಪ್ರಯೋಜನವನ್ನು ಪಡೆದರು.  188 ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಮಹಿಳಾ ಹಾಗೂ ಪುರುಷ ಸೇವಾದಳದವರು ಸಹಕರಿಸಿದರು. ವೈದ್ಯರು, ದಾದಿಯರ ಸಹಿತ ಭಾಗವಹಿಸಿದ ಎಲ್ಲರಿಗೂ ಫಲಾಹಾರ ಹಾಗೂ ಊಟದ ವ್ಯವಸ್ಥೆ ಏರ್ಪಡಿಸಲಾಯಿತು. ಶಿರಿಯ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕ ಲಲಿತ್‍ಕುಮಾರ್ ಸ್ವಾಗತಿಸಿ,  ಲಕ್ಷ್ಮಿನಾರಾಯಣ ಶೆಟ್ಟಿ ಎ.ಎಚ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries