ಕಾಸರಗೋಡು: ಜಿಲ್ಲೆಯ ಎಲ್ಲಾ ಮೋಟಾರು ವಾಹನ ಕಾರ್ಮಿಕರಿಗಾಗಿ ಮೋಟಾರು ವಆಹನ ಕಾಮಿಕ ಕಲ್ಯಾಣ ಮಂಡಳಿ ಹಾಗೂ ಮೋಟಾರು ವಾಹನ ಇಲಾಖೆ ವತಿಯಿಂದ 'ಇ-ಶ್ರಮ್'ನೋಂದಾವಣಾ ಶಿಬಿರ ಡಿ. 22ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಜರುಗಲಿದೆ. ಎಲ್ಲಾ ಮೋಟಾರು ವಾಹನ ಕಾರ್ಮಿಕರು ಶಿಬಿರದಲ್ಲಿ ಪಾಲ್ಗೊಂಡು ನೋಂದಾವಣೆ ಡನೆಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ಕೆ ರಾಧಾಕೃಷ್ಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 16ರಿಂದ 59ವರ್ಷದೊಳಗಿನ ಕಾರ್ಮಿಕರಿಗೆ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಇಪಿಎಫ್ ಹೊಂದಿರದವರು, ಆದಾಯತೆರಿಗೆ ಪಾವತಿಸದವರು, ಇಎಸ್‍ಐ ಸೌಲಭ್ಯ ಹೊಂದಿರದವರು ಶಿಬಿರದಲ್ಲಿ ನೋಂದಾವಣೆ ನಡೆಸಬಹುದಾಗಿದೆ. ಆಧಾರ್ ಕಾರ್ಡು, ಬ್ಯಾಂಕ್ ಪಾಸ್ ಬುಕ್, ಆಧಾರ್ ಜೋಡಣೆಗೊಂಡ ಮೊಬೈಲ್ ನೋಂದಾವಣೆಗೆ ದಾಖಲೆಗಳಾಗಿ ಪರಿಗಣಿಸಲಾಗಿದೆ.




