ಕಾಸರಗೋಡು: ಇತಿಹಾಸ ಪ್ರಸಿದ್ಧ ಬದರೀನಾಥ ಕ್ಷೇತ್ರದಿಂದ ಸುಮಾರು 3500 ಕಿಲೋ ಮೀಟರ್ ದೂರವಿರುವ ಶಬರಿಮಲೆ ಸನ್ನಿಧಿಗೆ ಕಾಲ್ನಡೆಯಾತ್ರೆ ನಡೆಸುತ್ತಿರುವ ಅಯ್ತಪ್ಪ ವೃತಾಧಾರಿಗಳಾದ ಕೂಡ್ಲು ನಿವಾಸಿ ಸನತ್ ಕುಮಾರ್, ಪ್ರಶಾಂತ್, ಸಂಪತ್ ಅವರಿಗೆ ಧನುಪೂಜೆ ನಡೆಯುತ್ತಿರುವ ದೇವರಗುಡ್ಡೆ ಶ್ರೀಶೈಲ ದೇವಸ್ಥಾನದಲ್ಲಿ ಗೌರವ ಸಲ್ಲಿಸಲಾಯಿತು.
ದೇವರಗುಡ್ಡೆ ಶ್ರೀ ಶೈಲ ಮಹಾದೇವ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಸರ್ವೈಶ್ವರ್ಯ ಪೂಜಾ ದಿನದಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ಕ್ಷೇತ್ರದ ಅಯ್ಯಪ್ಪ ವ್ರತಧಾರಿಗಳು, ನಾಗರಿಕರು ಭಾಗವಹಿಸಿದರು. ಈ ಸಂದರ್ಭ ಕಾಲ್ನಡೆ ಯಾತ್ರೆ ಕೈಗೊಳ್ಳುತ್ತಿರುವ ವ್ರತಧಾರಿಗಳಿಗೆ ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು. ಕ್ಷೇತ್ರ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಜಯಪ್ರಕಾಶ್ ನಾಯ್ಕ್, ಉಪಾಧ್ಯಕ್ಷ ದಿವಾಕರ ನಾಯ್ಕ್, ನಾರಾಯಣ ನಾಯ್ಕ್, ಪ್ರಧಾನ ಕಾರ್ಯದರ್ಶಿ ಗಣೇಶ್ ಮನ್ನಿಪ್ಪಾಡಿ, ಕೋಶಾಧಿಕಾರಿ ಮೋಹನ್ ನಾಯ್ಕ್, ದೇವರಗುಡ್ಡೆ ಅಯ್ಯಪ್ಪ ಸ್ವಾಮಿ ತಂಡದ ಗುರುಸ್ವಾಮಿ ಗಂಗಾಧರ ರೈ ಮೊದಲಾದವರು ಕಾಲ್ನಡೆ ಯಾತ್ರೆ ನಡೆಸುತ್ತಿರುವ ವ್ರತಧಾರಿಗಳಿಗೆ ಫಲಪುಷ್ಪ ಫಲಕವನ್ನು ನೀಡಿ ಗೌರವಿಸಿದರು. ಈ ಸಂದರ್ಭ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳಿಂದ ಗೌರವ ಸಮರ್ಪಣಾ ಕಾರ್ಯ ನಡೆಯಿತು.




