ಕೊಲ್ಲಂ: ಕೆ ರೈಲು ಯೋಜನೆ ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ ತೀವ್ರವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ವೇಳೆ ಜನರು ಮೈಮೇಲೆ ಪೆಟ್ರೋಲ್ ಸುರಿದು ಪ್ರತಿಭಟನೆ ನಡೆಸಿದರು. ಕೊಲ್ಲಂ ಕೊಟ್ಟಿಯಂ ಫೆರ್ರಿ ಟರ್ಮಿನಲ್‌ನಲ್ಲಿ ಈ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಮಾಜಿ ಅಧಿಕಾರಿ ಜಯಕುಮಾರ್ ಮತ್ತು ಅವರ ಕುಟುಂಬದವರು ಮೈಮೇಲೆ ಪೆಟ್ರೋಲ್ ಸುರಿದು, ಕೈಯಲ್ಲಿ ಲೈಟರ್ ಹಿಡಿದು ಪ್ರತಿಭಟನೆ ನಡೆಸಿದರು.
ಭೂಸ್ವಾಧೀನದ ಅಂಗವಾಗಿ ಅಧಿಕಾರಿಗಳು ಆಗಮಿಸಿದಾಗ ಪ್ರತಿಭಟನೆ ನಡೆಯಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಕೆ ರೈಲು ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಏತನ್ಮಧ್ಯೆ, ರಾಜ್ಯ ಸರ್ಕಾರವು ಕೆ ರೈಲು ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.
ರಾಜ್ಯದ ಹಲವೆಡೆ ಅಧಿಕಾರಿಗಳನ್ನು




