ನವದೆಹಲಿ : ಭಾರತದ ನ್ಯಾಯದಾನ ವ್ಯವಸ್ಥೆಯಲ್ಲಿ ಇನ್ನೂ ಆಳವಾಗಿ ಬೇರೂರಿರುವ ವಸಾಹತುಶಾಹಿ ಮನೋವೃತ್ತಿಯಿಂದ ಹೊರಬರಲು ಕಾನೂನು ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತದ ನ್ಯಾಯದಾನ ವ್ಯವಸ್ಥೆಯ ಕುರಿತು ಅರಿವು ಮೂಡಿಸಬೇಕು.
0
samarasasudhi
ಡಿಸೆಂಬರ್ 28, 2021
ನವದೆಹಲಿ : ಭಾರತದ ನ್ಯಾಯದಾನ ವ್ಯವಸ್ಥೆಯಲ್ಲಿ ಇನ್ನೂ ಆಳವಾಗಿ ಬೇರೂರಿರುವ ವಸಾಹತುಶಾಹಿ ಮನೋವೃತ್ತಿಯಿಂದ ಹೊರಬರಲು ಕಾನೂನು ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತದ ನ್ಯಾಯದಾನ ವ್ಯವಸ್ಥೆಯ ಕುರಿತು ಅರಿವು ಮೂಡಿಸಬೇಕು.
ಜಸ್ಟಿಸ್ ನಝೀರ್ ಅವರು ಹೈದರಾಬಾದ್‌ನಲ್ಲಿ ನಡೆದ ಅಖಿಲ ಭಾರತೀಯ ಅಧಿವಕ್ತ ಪರಿಷದ್ ಇದರ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ `ಡಿಕೊಲೋನೈಸೇಶನ್ ಆಫ್ ಇಂಡಿಯನ್ ಲೀಗಲ್ ಸಿಸ್ಟಂ' ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.
``ವಸಾಹತುಶಾಹಿಯ ಸಂದರ್ಭದ ಕಾನೂನು ವ್ಯವಸ್ಥೆ ಭಾರತದ ಜನಸಂಖ್ಯೆಗೆ ಸೂಕ್ತವಲ್ಲ ಎಂಬುದು ನಿಸ್ಸಂಶಯ. ಕಾನೂನು ವ್ಯವಸ್ಥೆಯ ಭಾರತೀಕರಣ ಇಂದಿನ ಅಗತ್ಯ,'' ಎಂದು ಅವರು ಹೇಳಿದರು.
ಭವಿಷ್ಯದ ವಕೀಲರು ಹಾಗೂ ನ್ಯಾಯಾಧೀಶರ ಸಾಮರ್ಥ್ಯ, ಜ್ಞಾನ ಮತ್ತು ದೇಶಭಕ್ತಿಯ ಮೇಲೆ ಭಾರತದ ಕಾನೂನು ವ್ಯವಸ್ಥೆ ಹಾಗೂ ಸಂಸದೀಯ ಪ್ರಜಾಪ್ರಭುತ್ವ ಬಹಳಷ್ಟು ಅವಲಂಬಿತವಾಗಿದೆ,'' ಎಂದು ಅವರು ಹೇಳಿದ್ದಾರೆ.