ಕಾಸರಗೋಡು: ಜಿಲ್ಲಾ ಪಂಚಾಯಿತಿಯ 2017-18ನೇ ಸಾಲಿನ ಯೋಜನೆಯಲ್ಲಿ ಒಳಗೊಂಡಿದ್ದ `30 ಲಕ್ಷ ವೆಚ್ಚದಲ್ಲಿ ಕಾಞಂಗಾಡ್ ಜಿಲ್ಲಾ ಹೋಮಿಯೋ ಆಸ್ಪತ್ರೆಯಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹೋಮಿಯೋ ಆಸ್ಪತ್ರೆಯಲ್ಲಿ ನೂತನ ಸಂಜೆ ಒಪಿಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಉದ್ಘಾಟಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅ. ದಿ. ಎನ್. ಸರಿತಾ, ಹೋಮಿಯೋ ಜಿಲ್ಲಾ ವೈದ್ಯಾಧಿಕಾರಿ ಡಾ. ಆರ್. ಅಶೋಕ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಳಾ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ, ಸಂಸದ ರಾಜಮೋಹನ್ ಉಣ್ಣಿತ್ತಾನ್, ಆಸ್ಪತ್ರೆ ಆಡಳಿತ ಸಮಿತಿ ಸದಸ್ಯ ಮನಾಫ್ ನುಳ್ಳಿಪಾಡಿ, ಎಚ್.ಕೆ.ಸಾಲಿ ವೇದಿಕೆಯಲ್ಲಿದ್ದರು. ಭಾಸ್ಕರನ್, ಕೆ. ರಾಮಕೃಷ್ಣ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ರಜಿತಾ ರಾಣಿ ಸ್ವಾಗತಿಸಿ, ಪಿ.ಚಂದ್ರಮೋಹನನ್ ವಂದಿಸಿದರು.




