HEALTH TIPS

ಪುಣೆ ನಿವಾಸಿಗಳಿಗೆ ದಕ್ಷಿಣ ಭಾರತದ ಊಟ-ತಿಂಡಿ ಪರಿಚಯಿಸಿದ್ದ ರೆಸ್ಟೋರೆಂಟ್‌ ಮಾಲೀಕ ಜಗನ್ನಾಥ ಶೆಟ್ಟಿ ನಿಧನ

     ಮುಂಬೈ: ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮೂರು ರೆಸ್ಟೋರೆಂಟ್‌ಗಳ ಮಾಲೀಕರಾದ ಪುಣೆ ಮೂಲದ ಹಿರಿಯ ಹೋಟೆಲ್ ಉದ್ಯಮಿ ಜಗನ್ನಾಥ ಶೆಟ್ಟಿ ಭಾನುವಾರ ನಿಧನರಾಗಿದ್ದಾರೆ.

     ಜಗನ್ನಾಥ್ ಅಣ್ಣಾ ಎಂದೇ ಅವರು ಜನಪ್ರಿಯವಾಗಿದ್ದರು. ಪುಣೆ ನಿವಾಸಿಗಳಿಗೆ ದಕ್ಷಿಣ ಭಾರತೀಯ ಪಾಕಪದ್ಧತಿ ಮತ್ತು ಥಾಲಿಗಳನ್ನು ಅಪಾರವಾಗಿ ಜನಪ್ರಿಯಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವೈಶಾಲಿ, ರೂಪಾಲಿ ಮತ್ತು ಆಮ್ರಪಾಲಿ ಎಂಬ ಮೂರು ರೆಸ್ಟೋರೆಂಟ್‌ಗಳನ್ನು ಇವರು ಸ್ಥಾಪಿಸಿದ್ದಾರೆ.

      ಪೂನಾವಾಲಾ, ಬಜಾಜ್‌, ಕಿರ್ಲೋಸ್ಕರ್‌ಗಳು ಮತ್ತು ಕಲ್ಯಾಣಿಗಳಂತಹ ಉನ್ನತ ವ್ಯಾಪಾರ ಕುಟುಂಬಗಳ ಸದಸ್ಯರಿಗೆ ವೈಶಾಲಿ ನೆಚ್ಚಿನ ರೆಸ್ಟೋರೆಂಟ್​ ಆಗಿತ್ತು. ಶೆಟ್ಟಿ ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರು ಪುತ್ರಿ ನಿಕಿತಾ ಮತ್ತು ಅಳಿಯ ಅಭಿಜೀತ್ ಅವರನ್ನು ಅಗಲಿದ್ದಾರೆ.

      ಜಗನ್ನಾಥ್ ಅಣ್ಣಾ ಅವರು ದಕ್ಷಿಣ ಭಾರತದ ಪಾಕಪದ್ಧತಿಯನ್ನು ಅನೇಕ ತಲೆಮಾರುಗಳಿಂದ ಪುಣೆ ನಿವಾಸಿಗರಿಗೆ ಪರಿಚಯಿಸಿದ್ದರು. ಅವರು ತಮ್ಮ ಸಂಪತ್ತಿನ ಬಹುಪಾಲು ಭಾಗವನ್ನು ಅಸಂಖ್ಯಾತರ, ಸಾಮಾಜಿಕ ಕಾರ್ಯಗಳಿಗೆ ದಾನ ಮಾಡುತ್ತಿದ್ದರು. ವರದಕ್ಷಿಣೆ ವಿರೋಧಿ ಆಂದೋಲನವನ್ನು ಪ್ರಾರಂಭಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.

     ಯುವಕರಾಗಿದ್ದಾಗ ಜಗನ್ನಾಥ್ ಅವರು 13 ನೇ ವಯಸ್ಸಿನಲ್ಲಿ ತಮ್ಮ ಚಿಕ್ಕಪ್ಪನೊಂದಿಗೆ ಮುಂಬೈ ಬಳಿಯ ಕಲ್ಯಾಣ್‌ನಲ್ಲಿ ತಿಂಗಳಿಗೆ 3 ರೂ.ಗೆ ಕೆಲಸ ಮಾಡಲು ಮನೆ ತೊರೆದಿದ್ದರು. ಜಗನ್ನಾಥ ಅಣ್ಣ ಅವರು 1932ರ ಅಕ್ಟೋಬರ್ 8ರಂದು ದಕ್ಷಿಣ ಕೆನರಾದ ಕಾರ್ಕಳದ ಸಮೀಪದ ಬೈಲೂರಿನ ಓಣಿಮಜಲು ಮನೆಯಲ್ಲಿ ಜನಿಸಿದರು. ಮಹತ್ವಾಕಾಂಕ್ಷೆಯೊಂದಿಗೆ ಚಿಕ್ಕ ಹುಡುಗರಾಗಿದ್ದಾಗಲೇ 1949 ರಲ್ಲಿ 17 ನೇ ವಯಸ್ಸಿನಲ್ಲಿ ಪುಣೆಗೆ ಬಂದರು.

     ಅವರು 1951 ರಲ್ಲಿ ಕೆಫೆ ಮದ್ರಾಸ್ (ಇಂದಿನ ರೂಪಾಲಿ) ಅನ್ನು ಪ್ರಾರಂಭಿಸಿದರು. ನಂತರ ಮದ್ರಾಸ್ ಹೆಲ್ತ್ ಹೋಮ್ ಅನ್ನು ಪ್ರಾರಂಭಿಸಿದಾಗ ಅವರ ಶ್ರಮಕ್ಕೆ ಫಲ ನೀಡಿತು. ಆ ದಿನಗಳಲ್ಲಿ ವೈಶಾಲಿ ಒಂದು ಸಣ್ಣ ರೆಸ್ಟೋರೆಂಟ್ ಆಗಿತ್ತು. ಇಂದು ಅವರ ರೆಸ್ಟೋರೆಂಟ್‌ಗಳು ಪುಣೆಯಲ್ಲಿ ಮನೆಮಾತಾಗಿವೆ ಮತ್ತು ಎಲ್ಲಾ ವಯಸ್ಸಿನ ಜನರಿಗೆ ಜನಪ್ರಿಯ ತಾಣಗಳಾಗಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries