HEALTH TIPS

ಒಮಿಕ್ರಾನ್‌ ಭೀತಿ ನಡುವೆಯೇ ಕಾಗೆಗಳ ಸಾವು: ದೃಢಪಟ್ಟ ಹಕ್ಕಿಜ್ವರ- ಕೋಳಿಗಳ ಸ್ಯಾಂಪಲ್‌ ರವಾನೆ, ಕೆಲವೆಡೆ ಮಾಂಸದಂಗಡಿ ಕ್ಲೋಸ್‌

                 ಅಗರ್‌ಮಲ್ವಾ :ಕರೊನಾ ರೂಪಾಂತರ ಒಮಿಕ್ರಾನ್‌ ಭೀತಿ ಹುಟ್ಟಿಸತೊಡಗಿದೆ. ಎಲ್ಲೆಡೆ ಪುನಃ ಕಟ್ಟೆಚ್ಚರ ವಹಿಸಲಾಗಿದೆ. ಇದಾಗಲೇ ಕೆಲವು ದೇಶಗಳ ವಿಮಾನ ಸ್ಥಗಿತಗೊಳಿಸಲಾಗಿದೆ, ಬಿಗಿಯಾದ ಚೆಕಿಂಗ್‌ ನಡೆಯುತ್ತಿದೆ. ಇದರ ನಡುವೆಯೇ ಮತ್ತೊಂದು ಶಾಕಿಂಗ್‌ ಸುದ್ದಿ ಆಂಧ್ರಪ್ರದೇಶದಿಂದ ಹೊರಬಂದಿದೆ.

            ಇಲ್ಲಿ ಸಾಲು ಸಾಲಾಗಿ ಕಾಗೆಗಳು ಮೃತಪಡುತ್ತಿರುವುದು ಆತಂಕಕ್ಕೆ ಈಡುಮಾಡಿದೆ. ಈ ಕಾಗೆಗಳ ಮಾದರಿಯನ್ನು ಪ್ರಯೋಗಾಲಯದಲ್ಲಿ ಒಳಪಡಿಸಿದಾಗ ಹಕ್ಕಿಜ್ವರ ಶುರುವಾಗಿರುವುದು ತಿಳಿದುಬಂದಿದೆ. ಭೋಪಾಲ್​​ನಿಂದ 180 ಕಿಮೀ ದೂರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ 48 ಕಾಗೆಗಳು ಸತ್ತಿದ್ದು, ಇವುಗಳಲ್ಲಿ ಹಕ್ಕಿಜ್ವರ ಸೋಂಕು (H5N8) ಪ್ರಯೋಗಾಲಯದಲ್ಲಿ ದೃಢಪಟ್ಟಿದೆ. ಅದೇ ಇನ್ನೊಂದೆಡೆ ಕೋಳಿಗಳು ಕೂಡ ಮೃತಪಟ್ಟಿವೆ.

               ಏಕಾಏಕಿ ಈ ಪರಿಯಲ್ಲಿ ಕಾಗೆಗಳು ಸಾಯುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸೋಂಕು ದೃಢಪಟ್ಟಿರುವ ಕಾರಣ, ಕೋಳಿಗಳ ಮಾದರಿಯನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಅಲ್ಲಿಯವರೆಗೂ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಮಟನ್​ ಮಾರಾಟ ಮಾರುಕಟ್ಟೆಯನ್ನು ಮುಚ್ಚಲು ತೀರ್ಮಾನಿಸಲಾಗಿದೆ.

           ಹಕ್ಕಿಜ್ವರ ಮನುಷ್ಯರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ, ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಚಳಿಗಾಲದಲ್ಲಿ ಹೆಚ್ಚಾಗಿ ವಲಸೆ ಹಕ್ಕಿಗಳು ಹಕ್ಕಿಜ್ವರ ಸೋಂಕನ್ನು ಹರಡುತ್ತವೆ. ಹೀಗಾಗಿ ರಾಜ್ಯದ ಸಂರಕ್ಷಿತ ಪ್ರದೇಶಗಳು ಮತ್ತು ನೀರಿನ ಮೂಲಗಳಿಗೆ ವಲಸೆ ಬರುವ ಹಕ್ಕಿಗಳ ಮೇಲೆ ನಿಗಾ ಇಡಲಾಗುವುದು ಎಂದಿದ್ದಾರೆ. ನೆರೆಯ ಆಂಧ್ರದಲ್ಲಿ ಇದು ಕಂಡುಬಂದಿರುವ ಹಿನ್ನೆಲೆಯಲ್ಲಿ, ಕರ್ನಾಟಕಕ್ಕೂ ಆತಂಕ ತಪ್ಪಿದ್ದಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries