ನವದೆಹಲಿ : ಯಾವುದೇ ಪ್ರಕರಣಗಳ ಶಂಕಿತರನ್ನು ವಿಚಾರಣೆ ಪೂರ್ಣಗೊಳ್ಳದೆ ಜೈಲಿಗಟ್ಟಬಾರದು ಹಾಗೂ ನಕಲಿ ಎನ್‍ಕೌಂಟರ್‍ಗಳಿಗೆ ಆಸ್ಪದವಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾಧೀಶ ಅರುಣ್ ಮಿಶ್ರಾ ಹೇಳಿದ್ದಾರೆ.
0
samarasasudhi
ಡಿಸೆಂಬರ್ 11, 2021
ನವದೆಹಲಿ : ಯಾವುದೇ ಪ್ರಕರಣಗಳ ಶಂಕಿತರನ್ನು ವಿಚಾರಣೆ ಪೂರ್ಣಗೊಳ್ಳದೆ ಜೈಲಿಗಟ್ಟಬಾರದು ಹಾಗೂ ನಕಲಿ ಎನ್‍ಕೌಂಟರ್‍ಗಳಿಗೆ ಆಸ್ಪದವಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾಧೀಶ ಅರುಣ್ ಮಿಶ್ರಾ ಹೇಳಿದ್ದಾರೆ.
ರಾಜಧಾನಿಯಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಸರಕಾರವು ಜನರಿಗೆ ಬಾಧ್ಯಸ್ಥವಾಗಿದೆ ಎಂದರು.
ಮಾನವ ಹಕ್ಕುಗಳ ರಕ್ಷಣೆಯಲ್ಲಿ ನಾಗರಿಕ ಸಮಾಜ ಮತ್ತು ಮಾಧ್ಯಮಗಳೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.
ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದ ಮಿಶ್ರಾ ಅದೇ ಸಮಯ "ವಾಕ್‍ಸ್ವಾತಂತ್ರ್ಯ ಲಗಾಮಿಲ್ಲದ ಕುದುರೆಯಂತಾಗಲು ಸಾಧ್ಯವಿಲ್ಲ ಹಾಗೂ ದೇಶದ ಸಾರ್ವಭೌಮತ್ವ, ಸಮಗ್ರತೆಗೆ ಭಂಗ ತರುವಂತಿಲ್ಲ" ಎಂದು ಹೇಳಿದರು.
ಅಕ್ಟೋಬರಿನಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸ್ಥಾಪನಾ ದಿನದ ಸಂದರ್ಭ ಮಾತನಾಡಿದ್ದ ಮಿಶ್ರಾ "ಅಂತರಾಷ್ಟ್ರೀಯ ಶಕ್ತಿಗಳ ಕುಮ್ಮಕ್ಕಿನಿಂದ ಭಾರತದ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಹೊರಿಸುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ" ಎಂದಿದ್ದರು.