HEALTH TIPS

ಗಡಿನಾಡ ಕನ್ನಡ ರಾಜ್ಯೋತ್ಸವ ಸಂಪನ್ನ: ಗಡಿನಾಡಿನ ಕನ್ನಡ ಚಟುವಟಿಕೆಗಳಿಗೆ ಕರ್ನಾಟಕ ಸರ್ಕಾರ ಬೆಂಬಲ ನೀಡಬೇಕು:ಎಡನೀರು ಶ್ರೀ ಅಭಿಮತ

      

           ಕಾಸರಗೋಡು: ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿ ಸಂವರ್ಧನೆಗೆ ಹೊಸ ತಲೆಮಾರನ್ನು ಸಿದ್ದಪಡಿಸುವ ಕ್ರಿಯಾತ್ಮಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವೂ ಸಮಗ್ರ ಯೋಜನೆಗಳೊಂದಿಗೆ ವ್ಯಾಪಕ ಸಹಕಾರ, ಬೆಂಬಲ ನೀಡಬೇಕು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.

            ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಇದರ ನೇತೃತ್ವದಲ್ಲಿ  ಭಾನುವಾರ ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಆಯೋಜಿಸಲಾದ ಗಡಿನಾಡ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.


        ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ sಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಪ್ರಾಚೀನ ಕನ್ನಡ ಸಾಂಸ್ಕøತಿಕ ನೆಲೆಗಟ್ಟು ಬಹುವಿಶಾಲವಾಗಿ ಹರಡಿರುವುದಕ್ಕೆ ಸಾಕ್ಷಿಯಾಗಿ ಗಡಿನಾಡು ಕಾಸರಗೋಡಲ್ಲಿ ಇಂದಿಗೂ ಕನ್ನಡದ ಸೊಗಡು ಉಳಿದು ಬೆಳೆದಿರುವುದು ಹೆಮ್ಮೆ ಎನಿಸಿದೆ. ಸವಾಲುಗಳ ನಡುವೆಯೂ ಅಸ್ಮಿತೆಯನ್ನು ಕಾಪಿಡುವಲ್ಲಿ ತಲೆಮಾರಿಂದ ತಲೆಮಾರಿಗೆ ನಡೆದುಬರುತ್ತಿರುವ ಹೋರಾಟದ ಹಾದಿಯ ಬದುಕುಗಳು ಇನ್ನಷ್ಟು ನಲುಗದಿರಲು ಪ್ರತಿಯೊಬ್ಬ ಕನ್ನಡ ಮನಸ್ಸೂ ಕೈಜೋಡಿಸುವ ಸನ್ಮನಸ್ಸು ಮೂಡಿಬರಬೇಕು. ಸಾಧಕರು, ಸಾಹಿತಿಗಳು, ಹೋರಾಟಗಾರರು, ಕಲಾವಿದರುಗಳನ್ನು ಗುರುತಿಸಿ ಗೌರವಿಸುವುದು ಇಂತಹ ಪ್ರೇರಣದಾಯಿ ಚಟುವಟಿಕೆಗಳ ಭಾಗ ಎಂದರು.


               ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಸಂಸ್ಥಾಪಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹುಭಾಷಾ ನೆಲೆಗಟ್ಟಿನ ಕಾಸರಗೋಡು ಸಮಗ್ರ ಕರ್ನಾಟಕಕ್ಕೇ ಮಾದರಿಯಾದ ಕನ್ನಡ ಪ್ರೇಮವನ್ನು ಉಳಿಸಿ ಬೆಳೆಸಿಕೊಂಡಿರುವುದು  ಸ್ತುತ್ಯರ್ಹವಾದುದು. ಈ ನಿಟ್ಟಿನಲ್ಲಿ ಸಹೃದಯರ ಪ್ರೋತ್ಸಾಹ ಉತ್ಸಾಹ ನೀಡುತ್ತದೆ ಎಂದರು.

             ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಗಿರೀಶ್ ಉಪ್ಪಾರ, ಶಾಸPರಾದ .ಎನ್.ಎ.ನೆಲ್ಲಿಕುನ್ನು, ಎಕೆಎಂ ಅಶ್ರಫ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗ ಆಯೋಗದ ಸದಸ್ಯ ಕೆ.ಟಿ.ಸುವರ್ಣ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಶುಭಾಶಂಸನೆಗೈಯ್ದರು.  

            ಈ ಸಂದರ್ಭ ದೈವನರ್ತಕ ಕಲಾವಿದ ಡಾ.ರವೀಶ ಪರವ, ಕನ್ನಡಪರ ಸಂಘಟಕ ಎಸ್.ಎಲ್.ಭಾರಧ್ವಾಜ್ ಬೇಕಲ್ ಅವರನ್ನು ಗೌರವಿಸಲಾಯಿತು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಎನ್., ಝಡ್ ಎ.ಕಯ್ಯಾರು, ರವಿ ನಾಯ್ಕಾಪು, ಪ್ರೊ.ಎ.ಶ್ರೀನಾಥ್, ಶ್ರೀಕಾಂತ್ ನೆಟ್ಟಣಿಗೆ, ಅಶ್ವಥ್ ಪೂಜಾರಿ ಲಾಲ್ ಬಾಗ್, ಅಕ್ಷತಾ ರಾಜ್ ಪೆರ್ಲ, ವನಿತಾ ವಾಣಿ ಕ್ರಾಸ್ತ, ಅಶ್ರಫ್ ಬೆದ್ರಂಪಳ್ಳ, ಹರೀಶ್ ಗೋಸಾಡ, ರೇಷ್ಮಾ, ತೇಜಕುಮಾರಿ, ವಸಂತ, ಆಶಾ, ಜಯಲಕ್ಷ್ಮೀ, ಸಂಧ್ಯಾಗೀತ ಬಾಯಾರು ಉಪಸ್ಥಿತರಿದ್ದರು. ರವಿ ನಾಯ್ಕಾಪು ಹಾಗೂ ವಿದ್ಯಾ ಗಣೇಶ್ ಅಣಂಗೂರು ನಿರೂಪಿಸಿದರು. ಬಳಿಕ ವಿವಿಧ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮೊದಲು ಡಾ.ರತ್ನಾಕರ ಮಲ್ಲಮೂಲೆ ಅವರ ಅ|ಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries