ಕುಂಬಳೆ: ಮಂಜೇಶ್ವರ ತಾಲೂಕು ವ್ಯಾಪ್ತಿಯ ಬ್ಲಾಕ್ ಹಾಗೂ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ನೌಕರರ ತೀವ್ರ ಕೊರತೆಯ ಶೋಚನೀಯ ಸ್ಥಿತಿಗೆ ಎದುರಾಗಿ ರಾಜ್ಯ ಸರ್ಕಾರದ ಧಮಕಕಾರಿ ನೀತಿ ಖಂಡಿಸಿ ಏಕಾಂಗಿ ಹೋರಾಟಕ್ಕೆ ಮಂಜೇಶ್ವರ ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ ಮುಂದಾಗಿದ್ದಾರೆ.
ಈ ಬಗ್ಗೆ ಸೋಮವಾರ ಕುಂಬಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಲಾಕ್ ಪಂಚಾಯಿತಿ ಕಚೇರಿ ಹಾಗೂ ಕ್ಷೇತ್ರದ ವಿವಿಧ ಪಂಚಾಯಿತಿಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಭರ್ತಿ ಮಾಡದೆ ನಿರ್ಲಕ್ಷಿಸುತ್ತಿದೆ. ಈ ಬಗ್ಗೆ ಪ್ರತ್ಯೇಕ ಹೋರಾಟಕ್ಕೆ ತಾನು ಮುಂದಾಗಿದ್ದು, ರಾಜ್ಯ ಸೆಕ್ರಟರಿಯೇಟ್ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇನೆ ಎಮದರು. ನೌಕರರ ಕೊರತೆಯ ಬಗ್ಗೆ ಜಿಲ್ಲಾಧಿಕಾರಿಗಳ ಸಹಿತ ಎಲ್ಲಾ ಅಧಿಕೃತರಿಗೂ ಹಲವು ಬಾರಿ ಮನವಿ ಮಾಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಗಡಿ ತಾಲೂಕನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂದರು.
ಹಮೀದ್ ಹೊಸಂಗಡಿ ಅವರ ಪ್ರತಿಭಟನೆಗೆ ಎಸ್ ಡಿಪಿಐ ಮಂಜೇಶ್ವರ ಕ್ಷೇತ್ರ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಎಸ್ ಡಿ ಪಿ ಐ ಕ್ಷೇತ್ರಾಧ್ಯಕ್ಷ ಅಶ್ರಫ್ ಬಡಾಜೆ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಮುಬಾರಕ್ ಕಡಂಬಾರ್ ಕ್ಷೇತ್ರದ ಉಪಾಧ್ಯಕ್ಷ ಅಲಿ ಶಹಾಮ, ಕುಂಬಳೆ ಪಂಚಾಯತಿ ಸಮಿತಿ ಸದಸ್ಯ ಅನ್ವರ್ ಆರಿಕ್ಕಾಡಿ ಉಪಸ್ಥಿತರಿದ್ದರು.




